ಡ್ರಗ್ಸ್ ಮಾರಾಟ ಆರೋಪದಡಿ ತಮಿಳುನಾಡು ಪೊಲೀಸರು ಧಾರವಾಡದ ಹಳೇ ಬಸ್ ನಿಲ್ದಾಣದ ಎದುರು ಇರುವ ರಾಜಸ್ಥಾನ ಮೆಡಿಕಲ್ಸ್‌ನ ಮಾಲಿಕ ಅನೀಲ್ ಶಾ ನನ್ನು ಬಂಧಸಿದ್ದಾರೆ.
ಧಾರವಾಡ ಹೃದಯ ಭಾಗದಲ್ಲಿ ಅರವಟಿಗೆ ಪಕ್ಕದಲ್ಲಿಯೇ ಇರುವ ರಾಜಸ್ಥಾನ ಮೆಡಿಕಲ್ ಶಾಪ್ ಮಾಲಿಕ ಅನೀಲ್ ಶಾನನ್ನು ಬಂಧಿಸಿ ಕರೆದೊಯ್ದಿರುವ ತಮಿಳುನಾಡು ಪೊಲೀಸರು, ಅನೀಲ್ ಶಾ, ಡ್ರಗ್ಸ್/ಪಿಲ್ಸ ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ.
ಅನೀಲ್ ಶಾ ಕಳೆದ ಹತ್ತಾರು ವರ್ಷಗಳಿಂದ ಅವಧಿ ಮುಗಿದ ಔಷಧಿ ಹಾಗೂ ನಿಷೇಧಿತ ಮಾದಕ ವಸ್ತುಗಳನ್ನು ತಮಿಳುನಾಡಿನಿಂದ ತರುತ್ತಿದ್ದ ಎನ್ನಲಾಗಿದೆ.
