ಗುಡ್ಡ ಕುಸಿತದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಕೇರಳದ ವಾಯನಾಡಿನಲ್ಲಿ ನಡೆದಿದೆ.
ಮೆಪ್ಪಾಡಿ ಬಳಿ ಗುಡ್ಡ ಕುಸಿದಿದ್ದು, ಇದುವರೆಗೆ ಬಂದ ಮಾಹಿತಿ ಪ್ರಕಾರ 19 ಜನ ಸಾವನ್ನಪ್ಪಿದ್ದಾರೆ. ಇನ್ನು 400 ಜನ ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಬೆಳಗಿನ ಜಾವ 2 ಘಂಟೆಯ ಹೊತ್ತಿಗೆ ನಡೆದಿದೆ.
ಬೆಳಿಗ್ಗೆ 4-30 ರ ಸುಮಾರಿಗೆ ಪಕ್ಕದಲ್ಲಿಯೇ ಇರುವ ತೊಂಡರ್ನಾಡ ಎಂಬಲ್ಲಿ ಮತ್ತೊಂದು ಭೂ ಕುಸಿತ ಸಂಭವಿಸಿದ್ದು, ನೇಪಾಳಿ ಮೂಲದ 5 ವರ್ಷದ ಮಗು ಸಾವನ್ನಪ್ಪಿದೆ.
ಭೂ ಕುಸಿತ ಹಾಗೂ ಗುಡ್ಡ ಕುಸಿತದ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಾಚರಣೆಗೆ ಇಳಿದಿರುವ ಜಿಲ್ಲಾಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿವೆ
NDRF ತಂಡಗಳು ಸಹ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ.
