ಜಿಲ್ಲೆಯ ನವಲಗುಂದ ತಾಲೂಕಿನ ಶ್ರೀ.ಎನ್.ಜಿ. ಬಾಳನಗೌಡ್ರ ಸರ್ಕಾರಿ ಪ್ರೌಢಶಾಲೆ ಶಿರೂರು ಶಾಲೆಗೆ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ಲಭಿಸಿದೆ.
ಸರ್.ಎಂ ವಿಶ್ವೇಶ್ವರಯ್ಯ ಜನಿಸಿದ ಪುಣ್ಯಭೂಮಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ, ಸತ್ಯಸಾಯಿ ಗ್ರಾಮದಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಯನ್ನು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂಧನ್ ಸಾಯಿ ಅವರು ಶನಿವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿಯು ಸನ್ಮಾನ ಪತ್ರ ಹಾಗೂ ಶಾಲೆಯ ಹಸಿರು ವನದ ಅಭಿವೃದ್ಧಿಗೆ 10ಸಾವಿರ ಚೆಕ್, ಮಕ್ಕಳಿಗೆ ಮೌಲ್ಯಯುತವಾದ 15 ಪುಸ್ತಕಗಳು ನೀಡಿದ್ದಾರೆ.
ಶ್ರೀ ಎನ್‌ಜಿ ಬಾಳನಗೌಡ್ರ ಸರಕಾರಿ ಪ್ರೌಢಶಾಲೆ ಶಿರೂರಗೆ ಪ್ರಶಸ್ತಿ ಲಭಿಸಿರುವುದಕ್ಕೆ ಮುಖ್ಯ ಶಿಕ್ಷಕರಾದ ಡಾ.ಭಾಗ್ಯ ಜ್ಯೋತಿ ಕೋಟಿಮಠ ಅನ್ನಪೂರ್ಣ ಟ್ರಸ್ಟ್‌ನ ಸಮಿತಿಯವರಿಗೆ, ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಶಾಲೆ ಎಲ್ಲ ಗುರುಬಳಗದವರಿಗೆ ಮತ್ತು ಮಕ್ಕಳಿಗೆ, ಊರಿನ ಹಿರಿಯರಿಗೆ, ಪಾಲಕ ಪೋಷಕರಿಗೆ, ಹಳೆಯ ವಿದ್ಯಾರ್ಥಿಗಳಿಗೆ, ದಾನಿಗಳಿಗೆ, ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ವಿವಿಧ ಸಂಘ-ಸಂಸ್ಥೆಗಳಿಗೆ ಹಾಗೂ ಸಹಕಾರ ನೀಡಿದ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರಶಸ್ತಿ ಬಂದಿದ್ದಕ್ಕಾಗಿ ಭೂದಾನಿ ಶಂಕರಗೌಡ ಬಾಳನ ಗೌಡ್ರ, ಶಿಕ್ಷಕರಾದ ಪ್ರಭುಲಿಂಗ ನರೇಗಲ್ಲ, ನಂದೇಶ್ವರ ಹೊಂಗಲ, ಪ್ರೀತಿ ನಾಯಕ, ಸಿದ್ದು ಮಾದರ, ಲಲಿತಾಕ್ಷಿ ಯಮನಾಳ, ಶಿವಾನಂದ ನಾಗೂರ, ಶ್ರೀದೇವಿ ಹಿರೇಮಠ ಹಾಗೂ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
