ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಭವಿಸುತ್ತಿರುವ ಗುಡ್ಡ ಕುಸಿತದ ಘಟನೆಗಳು ಆತಂಕ ಸೃಷ್ಟಿಸಿವೆ.
ಕೇರಳದಲ್ಲಿ ವಾಯನಾಡಿನಲ್ಲಿ ನಡೆದ ಭೂ ಕುಸಿತದಿಂದ ಇಲ್ಲಿಯವರೆಗೆ 300 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಕರ್ನಾಟಕದ ಶಿರಾಡಿ ಘಾಟ ರಸ್ತೆ ಮೇಲೆ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ಮುನ್ಸೂಚನೆ ಅರಿತ ವಾಹನ ಚಾಲಕರು ವಾಹನಗಳನ್ನು ದೂರದಲ್ಲಿಯೇ ನಿಲ್ಲಿಸಿದ್ದರ ಪರಿಣಾಮ ಬದುಕುಳಿದಿದ್ದಾರೆ.
ಅವರ ಕಣ್ಣೇದುರೆ ಗುಡ್ಡ ಕುಸಿದಿದ್ದು, ಮೊಬೈಲ್ ನಲ್ಲಿ ಗುಡ್ಡ ಕುಸಿಯುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ನಲ್ಲಿ ರಸ್ತೆ ಮೇಲೆ ಕುಸಿದ ಗುಡ್ಡ, ಇಂದಿನ ವಿಡಿಯೋ.
