ಹುಬ್ಬಳ್ಳಿ ಧಾರವಾಡಕ್ಕೆ ಹೊಸ ಪೊಲೀಸ್ ಕಮಿಷನರ್ ಬಂದ ಮೇಲೆ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕ್ರೈಮ್ ಚಟುವಟಿಕೆಗಳು ಸ್ತಬ್ದವಾಗಿವೆ.
ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 12 ಜನ ಖದಿಮರನ್ನು ಬಂಧಿಸಲಾಗಿದೆ.
ಆರೋಪಿತರಿಂದ 2.5 ಲಕ್ಷ ರೂಪಾಯಿ ಮೌಲ್ಯದ ಒಟ್ಟು 2.5 ಕೆ.ಜಿ ತೂಕದ ಗಾಂಜಾ, 5 ಲಕ್ಷ ರೂ. ಮೌಲ್ಯದ ಒಂದು ಡಿಸೈರ್ ಕಾರು ಹಾಗೂ 2,000/- ರೂ ನಗದು ಹಣ ಮತ್ತು 2 ತಲವಾರ ಒಂದು ಡ್ಯಾಗರ ಮತ್ತು 10 ಮೋಬೈಲ್ ಪೋನಗಳು ಸೇರಿ ಒಟ್ಟು 7.52 ಲಕ್ಷ ರೂಪಾಯಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂದು ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರಿಂದ ಬೆಂಡಿಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕೆ.ಇ.ಬಿ ಗ್ರೀಡ್ ಹತ್ತಿರ ಯಾರೋ ಅಪರಿಚಿತ ವ್ಯಕ್ತಿಗಳು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಬಾತ್ಮೀ ಬಂದ ಮೇರೆಗೆ, ಎಸ್.ಟಿ. ವಡೆಯರ್ ಎ.ಸಿ.ಪಿ. ಸಿಸಿಬಿ, ಹುಬ್ಬಳ್ಳಿ ಇವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಪೊಲೀಸ್ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ, ಪ್ರಭು ಆರ್ ಗಂಗೇನಹಳ್ಳಿ, ಹಾಗೂ ಶ್ರೀ ಅಲಿ ಶೇಖ, ಪಿ.ಐ ಬೆಂಡಿಗೇರಿ ಪಿ.ಎಸ್ ಮತ್ತು ಸಿಸಿಬಿ ಹು-ಧಾ ಮತ್ತು ಬೆಂಡಿಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಜನರು ಜಂಟಿ ದಾಳಿ ಮಾಡಿ ಗಾಂಜಾ ಮಾರುವವರ ಹೆಡಮುರಿಗೆ ಕಟ್ಟಿದ್ದಾರೆ.
ಆರೋಪಿಗಳಾದ, ಓಡಿಸ್ಸಾದ ಕೇಶಬಚಂದ್ರ ಹಾಗೂ ನೀಲಾಂಬರ ರಾವುತ್,
ಹಾವೇರಿಯ ತೌಸಿಫ್ ಅಹಮ್ಮದ, ಹಳೇ ಹುಬ್ಬಳ್ಳಿಯ
ಪವನ, ಸಿದ್ದಾರ್ಥ, ಮಂಜುನಾಥ, ನದೀಂ, ಕಾರ್ತಿಕ,
ವಿಟ್ಟಲ, ಶಾನವಾಜ, ಕಮರಿಪೇಟೆಯ ಗಣಪತಸಾ,
ಉತ್ತರಾಖಂಡದ ಮಹಮ್ಮದಲಿ, ಎಂಬ ಖದಿಮರನ್ನು ಬಂಧಿಸಲಾಗಿದೆ.
