ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ಬೆಳೆಯುತ್ತಿರುವದನ್ನು ಸಹಿಸದೆ ಕೆಲವರು ನನ್ನನ್ನು ಮುಗಿಸಲು ಸಂಚು ರೂಪಿಸಿದ್ದಾರೆ ಎಂದು ಧಾರವಾಡ ಅಂಜುಮನ್ ಅಧ್ಯಕ್ಷ ಹಾಗೂ ಕಾಂಗ್ರೇಸ್ ಮುಖಂಡ ಇಸ್ಮಾಯಿಲ್ ತಮಟಗಾರ ಆರೋಪಿಸಿದ್ದಾರೆ.
ಕರ್ನಾಟಕ ಫೈಲ್ಸ್ ಜೊತೆ ಮಾತನಾಡಿರುವ ಇಸ್ಮಾಯಿಲ್ ತಮಟಗಾರ, ನನ್ನನ್ನು ಕೊಲೆ ಮಾಡಲು ಕಳೆದ ಒಂದೂವರೆ ವರ್ಷಗಳಿಂದ ಸಂಚು ರೂಪಿಸಲಾಗಿದೆ ಎಂದು ಹೇಳಿದರು.
ನನ್ನನ್ನು ಮುಗಿಸಲು ಕಾಂಗ್ರೇಸ್ ಪಕ್ಷದಲ್ಲಿಯೇ ಕೆಲವರು ಸ್ಕೆಚ್ ಹಾಕಿದ್ದಾರೆಂದು ಇಸ್ಮಾಯಿಲ್ ತಮಟಗಾರ, ಗಂಭೀರ ಆರೋಪ ಮಾಡಿದ್ದಾರೆ.
ಕೊಲೆ ಮಾಡಲು ಸಂಚು ರೂಪಿಸಿದವರನ್ನು ಬಂಧಿಸಿ, ಸಮಗ್ರ ತನಿಖೆ ಮಾಡಿದಾಗ ಮಾತ್ರ ಇದರ ಹಿಂದೆ ಯಾರ ಕೈವಾಡವಿದೆ ಅನ್ನೋದನ್ನು ಬಹಿರಂಗಗೊಳ್ಳಬೇಕು ಎಂದು ಇಸ್ಮಾಯಿಲ್ ಒತ್ತಾಯಿಸಿದ್ದಾರೆ.
ನನಗೆ ರಕ್ಷಣೆ ಇಲ್ಲಾ. ನನ್ನ ಮೇಲಿನ ಹಲ್ಲೆಗೆ ಷಡ್ಯಂತ್ರ ನಡೆದಿದ್ದರ ಬಗ್ಗೆ ಇಲಾಖೆ ಗಮನಕ್ಕೆ ತಂದಿದ್ದೇನೆ ಎಂದಿರುವ ಇಸ್ಮಾಯಿಲ್ ತಮಟಗಾರ, ಕಾಂಗ್ರೇಸ್ ಪಕ್ಷದಲ್ಲಿ ಕೆಲವರು ನನ್ನ ಮುಗಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಸಮುದಾಯದ ಯುವಕರನ್ನೇ ಬಳಸಿಕೊಂಡು ನನ್ನ ಕೊಲೆ ಮಾಡಿಸುವ ಘಟನೆ ನಿನ್ನೇ ಬಹಿರಂಗಗೊಂಡಿದೆ ಎಂದು ಇಸ್ಮಾಯಿಲ್ ಹೇಳಿದರು
