ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಕೊಲೆಗೆ ಹನ್ನೆರಡು ಯುವಕರ ತಂಡ ಸ್ಕೆಚ್ ಹಾಕಿರುವ ಘಟನೆ ನಡೆದಿದೆ.
ನಿನ್ನೇ ಸಂಜೆ 7 ಘಂಟೆಗೆ ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ, ಸಂಸ್ಥೆಯ ಪದಾಧಿಕಾರಿಗಳ ಸಭೆ ನಿಗದಿಯಾಗಿತ್ತು. ಅಲ್ಲಿಯೇ ಇಸ್ಮಾಯಿಲ್ ತಮಾಟಗಾರರನ್ನು ಕೊಲೆ ಮಾಡಲು ಸ್ಕೆಚ್ ಹಾಕಲಾಗಿತ್ತು ಎನ್ನಲಾಗಿದೆ.
ಅಂಜುಮನ್ ಆವರಣದಲ್ಲಿಯೇ ಕೊಲೆ ಮಾಡಲು ಯೋಚಿಸಲಾಗಿತ್ತು, ಆತ ಕೈಗೆ ಸಿಗಲಿಲ್ಲ, ಎಂದು ಹಂತಕರು, ಇಸ್ಮಾಯಿಲ್ ತಮಟಗಾರನ ಸಹೋದರನ ಮನೆಗೆ ಹೋಗಿ ಆವಾಜ್ ಹಾಕಿದ್ದಾರೆ. ಆವಾಗ ಈ ಘಟನೆ ಬೆಳಕಿಗೆ ಬಂದಿದೆ. ಇಸ್ಮಾಯಿಲ್ ಸಹೋದರರು ಕೊಲೆಗೆ ಸ್ಕೆಚ್ ಹಾಕಿದವರನ್ನು ಗುರುತಿಸಿದ್ದಾರೆ.
ಇಸ್ಮಾಯಿಲ್ ತಮಟಗಾರ ಬೆಂಗಳೂರಿಗೆ ಹೋಗಿದ್ದರಿಂದ, ಘಟನೆ ತಪ್ಪಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಇಸ್ಮಾಯಿಲ್ ಬೆಂಬಲಿಗರು ಧಾರವಾಡ ಶಹರ ಠಾಣೆ ಎದುರು ಜಮಾಯಿಸಿದರು.
ಹಡ್ಡಾ ಸೂಹೇಲ್ ಹಾಗೂ ಕಾಜುಲೀನ್ ಬಾಣಗಾರ ಸೇರಿದಂತೆ ಹತ್ತು ಜನರ ತಂಡ, ಇಸ್ಮಾಯಿಲ್ ಕೊಲೆಗೆ ಸ್ಕೆಚ್ ಹಾಕಿದ್ದಾರೆಂದು ಇಸ್ಮಾಯಿಲ್ ಸಹೋದರ ಜಮಾಲ್ ಆರೋಪಿಸಿದ್ದಾರೆ.
ಧಾರವಾಡ ಶಹರ ಠಾಣೆ ಪೊಲೀಸರು ಇಸ್ಮಾಯಿಲ್ ಕೊಲೆಗೆ ಹೊಂಚು ಹಾಕಿದವರ ಬೆನ್ನು ಬಿದ್ದಿದ್ದಾರೆ. ಇಸ್ಮಾಯಿಲ್ ತಮಟಗಾರ ಬೆಂಬಲಿಗರಲ್ಲಿ ಈ ಘಟನೆ ಆತಂಕ ಮೂಡಿಸಿದೆ.
ಸಧ್ಯ ಇಸ್ಮಾಯಿಲ್ ತಮಟಗಾರ ಬೆಂಗಳೂರಿನಲ್ಲಿದ್ದು, ನಾಳಿದ್ದು ಧಾರವಾಡಕ್ಕೆ ಆಗಮಿಸಲಿದ್ದಾರೆ. ಈ ಹಿಂದೆ ಇಸ್ಮಾಯಿಲ್ ತಮಟಗಾರ ತನಗೆ ಪ್ರಾಣ ಭಯ ಇದೆ, ರಕ್ಷಣೆ ಬೇಕೆಂದು ಪೊಲೀಸ ಕಮಿಷನರ ಅವರಿಗೆ ಮನವಿ ಮಾಡಿದ್ದರು.
