ಧಾರವಾಡದ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರರನ್ನು ಕೊಲೆ ಮಾಡಲು ನಡೆದಿದ್ದ ಸಂಚು ಬಯಲಾಗಿದ್ದು, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.
ಧಾರವಾಡ, ಶಾಂತಿಪ್ರಿಯ ನಗರವಾಗಿದ್ದು, ಇಸ್ಮಾಯಿಲ್ ತಮಟಗಾರರನ್ನು ಕೊಲೆ ಮಾಡಲು ಸಂಚು ನಡೆದಿದ್ದು, ಆಶಾದಾಯಕ ಬೆಳವಣಿಗೆಯಲ್ಲ ಎಂದರು.
ಮಾಧ್ಯಮದ ಮೂಲಕ ನನಗೆ ವಿಷಯ ಗೊತ್ತಾಗಿದೆ ಎಂದ ಶಾಸಕ ಬೆಲ್ಲದ ಅವರು ಸಿಕ್ಕವರೆಲ್ಲ 18 ರಿಂದ 20 ವರ್ಷ ವಯಸ್ಸಿನ ಹುಡುಗರಾಗಿದ್ದಾರೆ. ಪೊಲೀಸರು ಗಾಂಜಾ ಮಾರುವವರನ್ನು, ಸರಬರಾಜು ಮಾಡುವವರನ್ನು ಹಿಡಿದು ಒಳಗೆ ಹಾಕಬೇಕು ಎಂದರು.
