ಇಡೀ ದೇಶದಲ್ಲಿ ನಾಳೆ 78 ಸ್ವಾತಂತ್ರೋತ್ಸವದ ಸಂಭ್ರಮ ಮನೆ ಮಾಡಲಿದೆ. ಬೆಳಿಗ್ಗೆ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ದ್ವಜಾರೋಹಣ ನೆರವೇರಲಿದೆ.
ಆದರೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಗಾಂಧಿ ಪ್ರತಿಮೆ ಅವರಣದಲ್ಲಿ ಕಸಕಡ್ಡಿಗಳು, ಊಟದ ತಟ್ಟೆಗಳು ಬಿದ್ದಿವೆ.
ಸರ್ಕಾರಿ ಕಚೇರಿಗಳಿಗೆ ವಿದ್ಯುತ್ತ ಅಲಂಕಾರ ಮಾಡಲಾಗುತ್ತಿದೆಯಾದರು. ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಗಾಂಧಿ ಪ್ರತಿಮೆ ಆವರಣ ಸ್ವಚ್ಚತೆಗಾಗಿ ಕಾಯುತ್ತಿದೆ.
ಪಾಲಿಕೆ ಅಧಿಕಾರಿಗಳಾದರು ಗಾಂಧಿ ಪ್ರತಿಮೆ ಇರುವ ಆವರಣ ಸ್ವಚ್ಚಗೊಳಿಸುತ್ತಾರಾ ಕಾದು ನೋಡಬೇಕಾಗಿದೆ.
