ಇನ್ಸ್ಟಾಗ್ರಾಮ್ ರೀಲ್ಸ್ ಮಾಡಲು ಹೋಗಿ ಯುವತಿಯೊಬ್ಬಳು 6 ನೇ ಮಹಡಿಯಿಂದ ಕೆಳಗೆ ಬಿದ್ದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದನಲ್ಲಿ ನಡೆದಿದೆ.
16 ವರ್ಷದ ಮೋನಿಶಾ ಎಂಬಾಕೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡುತ್ತಿದ್ದಳು. ಆಕೆಯ ಕೈಯಿಂದ ಮೊಬೈಲ್ ಕೆಳಗೆ ಬೀಳುತ್ತಿದ್ದಂತೆ ಮೊಬೈಲ್ ಹಿಡಿಯಲು ಹೋಗಿ ಕೆಳಗೆ ಬಿದ್ದಿದ್ದಾಳೆ.
ಕೆಳಗೆ ಬಿದ್ದ ಪರಿಣಾಮ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಮೋನಿಶಾಳನ್ನು ಆಸ್ಪತ್ರೆಗೆ ಧಾಖಲಿಸಲಾಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ಆಕೆಯ ಹುಚ್ಚು, ಪ್ರಾಣಕ್ಕೆ ಕುತ್ತು ತಂದಿದೆ
