ಧಾರವಾಡದ ರಂಗಾಯಣಕ್ಕೆ ನಿರ್ದೇಶಕರಾಗಿ ಸರ್ಕಾರ ಖ್ಯಾತ ರಂಗಕರ್ಮಿ ರಾಜು ತಾಳಿಕೋಟೆಯವರನ್ನು ನೇಮಕ ಮಾಡಿದ್ದೆ ತಡ, ಕೆಲವು ಸೋ ಕಾಲ್ಡ್ ರಂಗ ಸಮಾಜದವರಿಗೆ ಹೊಟ್ಟೆಕಿಚ್ಚು ಆರಂಭವಾಗಿದೆ.
ಕೆಲವರು ಜಾತಿ ಬಣ್ಣ ಲೇಪನ ಮಾಡಿದರೆ, ಅಂತರಾಷ್ಟ್ರೀಯ ಖ್ಯಾತಿಯ, ಅದ್ಭುತ ರಂಗ ನಿರ್ದೇಶಕಿ ರಜನಿ ಗರುಡ, ರಾಜು ತಾಳಿಕೋಟೆಯವರ ನೇಮಕಕ್ಕೆ ” ಕಾಮಿಡಿ ರಂಗಾಯಣ ಧಾರವಾಡ ” ಎಂದು ಹೇಳುವ ಮೂಲಕ ಕುಹುಕದ ಮಾತನ್ನಾಡಿದ್ದಾರೆ.
ಫೇಸ್ ಬುಕ್ ನಲ್ಲಿ ರಂಗಾಯಣದ ಕುರಿತು ಬರೆದುಕೊಂಡಿದ್ದ ರಜನಿ ಗರುಡರಿಗೆ, ಹಿಂದಿನ ನಿರ್ದೇಶಕ, ಪ್ರಮೋದ ಶಿಗ್ಗಾವ್ ಅವರು ಧಾರವಾಡ ರಂಗಾಯಣದ ಮೇಲೆ ರಂಗ ಸಮಾಜಕ್ಕೆ ತುಂಬಾ ಸಿಟ್ಟಿತ್ತು ಅಂತ ಕಾಣ್ಸತ್ತೆ ಅಂತ ಪ್ರತಿಕ್ರಿಯಿಸಿದ್ದಾರೆ.
ಇನ್ನು ಕೆಲವರು ಸರ್ಕಾರದ ನಿರ್ಧಾರಕ್ಕೆ ಕಲಿಯುಗದ “ದುಡುಕ” ತನ ಎಂದು ಹೇಳಿದರೆ, ಮತ್ತೊಬ್ಬರು ರಾಜು ತಾಳಿಕೋಟೆಯವರ ವೈಯುಕ್ತಿಕ ಜೀವನದ ಮೇಲೆ ಕೆಲ್ಲೆಸೆದಿದ್ದಾರೆ. ಇಬ್ಬರ ಹೆಂಡರ ಮುದ್ದಿನ ಗಂಡ ಎಂದು ಚೇಷ್ಟೆ ಮಾಡಿದ್ದಾರೆ.
ಈ ಹಿಂದೆ ಪ್ರಕಾಶ ಗರುಡ ಅವರು ನಿರ್ದೇಶಕರಾದಂತ ಸಂದರ್ಭದಲ್ಲಿ ಎಲ್ಲವು ಸರಿಯಿತ್ತಾ? ಅನ್ನೋ ತರದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ರಜನಿ ಗರುಡರನ್ನು ಪ್ರಶ್ನಿಸಲು ಮುಂದಾಗಿದ್ದಾರೆ.
