ಧಾರವಾಡ ಯಾವುದಕ್ಕೆಲ್ಲ ಹೆಸರು ವಾಸಿಯಾಗಿದೆಯೋ, ಅಂತಹ ಧಾರವಾಡದಲ್ಲಿ ಕೆಲವು ನಟೋರಿಯಸ್ ಗಳು ಜಾತ್ರೆ ಮಾಡುತ್ತಿದ್ದಾರೆ.
ಧಾರವಾಡದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೀಡುವ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದವನ ಹೆಡೆಮುರಿಗೆ ಕಟ್ಟಲಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ನಕಲಿ ಜಾತಿಪ್ರಮಾಣಪತ್ರ ಸಲ್ಲಿಸಿ ಟೆಂಡರ್ ಪಡೆದಿರುವ ಪ್ರಕರಣ ಬೆಳಗಾವಿ ಜಿಲ್ಲೆಯ ಪೊಲೀಸರು ಹೊರಹಾಕಿದ್ದಾರೆ.
ಪರಿಶಿಷ್ಟ ಜಾತಿಗೆ ಮೀಸಲಿದ್ದ ಕಾಮಗಾರಿಯ ಟೆಂಡರನ್ನು ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಗುತ್ತಿಗೆ ಪಡೆದ ಬಾಳಕೃಷ್ಣ ಚೊಳಚಗುಡ್ಡ ಎಂಬ ಗುತ್ತಿಗೆದಾರನನ್ನು ಜೈಲಿಗೆ ಅಟ್ಟಲಾಗಿದೆ.
29 ಲಕ್ಷ 55 ಸಾವಿರ ಹಾಗೂ 17 ಲಕ್ಷ 90 ಸಾವಿರ ರೂಪಾಯಿ ಎಸ್.ಸಿ ವರ್ಗಕ್ಕೆ ಮೀಸಲಿರುವ ಎರಡು ಟೆಂಡರಗಳನ್ನು ಈ ಗುತ್ತಿಗೆದಾರ ಪಡೆದಿದ್ದ.
ಪ್ರವರ್ಗ 2ಬಿ ಗೆ ಸೇರಿದ ಈತ ಧಾರವಾಡದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ನೀಡುವ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವದು ಬೆಳಕಿಗೆ ಬಂದಿದೆ.
ಇನ್ನು ಹತ್ತಕ್ಕೂ ಹೆಚ್ಚು ಜನ ನಕಲಿ ಗುತ್ತಿಗೆದಾರರು ಧಾರವಾಡ ಇದ್ದಾರೆ ಎಂದು ತನಿಖೆ ವೇಳೆ ಬಹಿರಂಗವಾಗಿದೆ. ಇವರು SCST ಸಮುದಾಯದ ಗುತ್ತಿಗೆದಾರರಿಗೆ ಸಿಗಬೇಕಾದ ಕೆಲಸಗಳನ್ನು SCST ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಕಾಮಗಾರಿಗಳನ್ನು ಟೆಂಡರ್ ಮೂಲಕ ಪಡೆಯುತ್ತಿದ್ದಾರೆಂದು ಹೇಳಲಾಗಿದೆ.
ನಕಲಿ ಜಾತಿ ಪ್ರಮಾಣ ಪತ್ರ ಧಾರವಾಡದಲ್ಲಿಯೇ ಪಡೆದಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕರ್ನಾಟಕ ಫೈಲ್ಸ್ ಗೆ ಧಾಖಲೆಗಳು ಲಭ್ಯವಾಗಿವೆ.