ಮೂಡಾ ಹಗರಣ ಕೇಳಿ ಬರುವ ಮುನ್ನವೇ ಕೇಳಿ ಬಂದಿದ್ದ ಕೆಲವು ಸಚಿವರ ಬದಲಾವಣೆ ವಿಷಯ ಇನ್ನು ಜೀವಂತವಾಗಿದೆ.
ಇದೆಲ್ಲದರ ಮಧ್ಯೆ ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ಸಣ್ಣದೊಂದು ಸಚಿವಗಿರಿಯ ಸಂಚು ನಡೆದಿದೆ.
ಸಧ್ಯ ಉಸ್ತುವಾರಿ ಸಚಿವರಾಗಿರುವ ಸಂತೋಷ ಲಾಡ್ ಬದಲಾದ್ರೆ ಆ ಸ್ಥಾನ ನನಗೆ ಸಿಗುತ್ತದೆ ಎಂದು ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ, ತಮ್ಮ ಅಪ್ತ ಬಳಗದ ಎದುರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.