80 ರ ದಶಕದಲ್ಲಿ, ಬೆಂಗಳೂರಿಗೆ ಹೋಗಿ, ಕರ್ನಾಟಕದ ಬಹುತೇಕ ರಾಜಕೀಯ ನಾಯಕರಿಗೆ ಶಕ್ತಿ ತುಂಬಿದ್ದ ಧಾರವಾಡದ ಮೊಹಮ್ಮದ ರಿಜ್ವಾನ್ ನವಾಬರಿಗೆ ಈಗ ಮಹತ್ವದ ಹುದ್ದೆ ಲಭಿಸಿದೆ.
ಸರ್ಕಾರ ರಿಜ್ವಾನ ನವಾಬರನ್ನು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ( KSRTC ) ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಧಾರವಾಡದಲ್ಲಿ ಹುಟ್ಟಿ ಬೆಳೆದಿರುವ ರಿಜ್ವಾನ ನವಾಬ ಅವರು, ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ ಆಗಿ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುವ ರಿಜ್ವಾನ ನವಾಬ ಅವರು, ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ.
ಹುಟ್ಟಿ ಬೆಳೆದ ಧಾರವಾಡದಲ್ಲಿರುವ ಅನೇಕ ಸಂಘ ಸಂಸ್ಥೆಗಳಿಗೆ, ಆರ್ಥಿಕ ಸಹಾಯ ಮಾಡಿರುವ ಅವರು, ಇಂದಿಗೂ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
