ವಾಲ್ಮೀಕಿ ಹಗರಣ ಹಾಗೂ ನವಲಗುಂದ ಗುಡ್ಡದ ಮಣ್ಣಿಗೆ ಸಂಬಂಧಿಸಿದಂತೆ ನವಲಗುಂದದಲ್ಲಿಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿರುವ ನಡೆದ ಪ್ರತಿಭಟನೆಯಲ್ಲಿ ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಇದೇ ವೇಳೆ ನವಲಗುಂದ ಗುಡ್ಡದ ಮಣ್ಣನ್ನು ಅನಧಿಕೃತವಾಗಿ ಅಗೆಯಲಾಗುತ್ತಿದೆ ಎಂದು ಆರೋಪಿಸಿದ ಮಾಜಿ ಸಚಿವ ಶಂಕರ ಪಾಟೀಲ. ಸಮಗ್ರ ತನಿಖೆಗೆ ಆಗ್ರಹಿಸಿದರು.
ಗುಡ್ಡದ ಮಣ್ಣು ಅಗೆಯಲು ಈ ಈ ಹಿಂದೆಯೇ ಪುರಸಭೆ ಸದಸ್ಯರು ಸಹಿ ಮಾಡಿ ಅನುಮತಿ ಕೇಳಿದ್ದಾರೆ ಅನ್ನೋ ತರ ಬಿಂಬಿಸಿ, ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.
