Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಬೆಂಗಳೂರಿನಲ್ಲಿ ಖ್ಯಾತ ನಟ ನಾನಿ…’ಸೂರ್ಯನ ಸಾಟರ್ಡೆ’ ಸಿನಿಮಾ ಪ್ರಚಾರ ನಡೆಸಿದ ನಟ

ತೆಲಗಿನಲ್ಲಿ ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರ ನಟನೆಯ ‘ಸರಿಪೋದಾ ಶನಿವಾರಂ’ ತಮಿಳು ಸಿನಿಮಾ ಕನ್ನಡದಲ್ಲಿ ‘ಸೂರ್ಯನ ಸಾಟರ್ಡೆ’ ಹೆಸರಲ್ಲಿ ಬಿಡುಗಡೆ ಆಗಲಿದೆ.

ಈ ಸಿನಿಮಾದ ಪ್ರಚಾರಕ್ಕೆ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದಾರೆ. ಪ್ರಚಾರದ ಅಂಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ನಾನಿ, ಕನ್ನಡ ಸಿನಿಮಾಗಳು ಹಾಗೂ ಪ್ರಶಸ್ತಿಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ 28ಕ್ಕೆ ‘ಸೂರ್ಯನ ಸಾಟರ್ಡೆ’ ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿಯೂ ಸಿನಿಮಾ ತೆರೆಗೆ ಬರುತ್ತಿದ್ದು, ಥಿಯೇಟರ್ ನಲ್ಲಿ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡರು.

 

ಶಿವಣ್ಣನನ್ನು ಭೇಟಿಯಾದ ನಾನಿ

ನಾನಿ ದೊಡ್ಮನೆಗೂ ವಿಸಿಟ್ ಹಾಕಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಚಿತ್ರದ ಬಗ್ಗೆ ಒಂದಷ್ಟು ಮಾತಕಥೆ ನಡೆಸಿದ್ದಾರೆ. ಈ ಹಿಂದೆ ನಾನಿ ನಟನೆಯ ಹಾಯ್ ನಾನ್ನ ಸಿನಿಮಾವನ್ನು ನೋಡಿ ಶಿವಣ್ಣ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಸೂರ್ಯನ ಸಾಟರ್ಡೆ’ ಚಿತ್ರವನ್ನ ವಿವೇಕ್ ಆತ್ರೇಯಾ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಮೂಲಕ ನಾನಿಗೆ ಎರಡನೇ ಬಾರಿಗೆ ವಿವೇಕ್ ಆತ್ರೇಯಾ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಹಿಂದೆ ಅಂಟೆ ಸುಂದರಾನಿಕಿ ಸಿನಿಮಾವನ್ನ ವಿವೇಕ್ ಆತ್ರೇಯಾ ಮಾಡಿದ್ದರು. ಈ ಚಿತ್ರದಲ್ಲಿ ನಾನಿನೇ ಹೀರೋ ಆಗಿದ್ದರು. ಇದು ಫ್ಯಾಮಿಲಿ ಎಂಟರಟೈನಮೆಂಟ್ ಇರೋ ಹಾಸ್ಯಮಯ ಚಿತ್ರವೇ ಆಗಿತ್ತು. ಸೂರ್ಯನ ಸಾಟರ್ಡೆ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು, ತಮಿಳು, ಹಿಂದಿ, ಮಲೆಯಲಾಂ, ಕನ್ನಡ ಹಿಂಗೆ ಎಲ್ಲ ಭಾಷೆಯಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತದೆ.

ಸೂರ್ಯನ ಸಾಟರ್ಡೆ ಸಿನಿಮಾವನ್ನ ದಾನಯ್ಯ ಹಾಗೂ ಕಲ್ಯಾಣ್ ದಾಸರಿ ನಿರ್ಮಾಣ ಮಾಡಿದ್ದಾರೆ. ನಾನಿಗೆ ಜೋಡಿಯಾಗಿ ಪ್ರಿಯಾಂಕಾ ಮೋಹನ್ ನಟಿಸಿದ್ದು, ಎಸ್ ಜೆ ಸೂರ್ಯ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಆಗಸ್ಟ್-29 ತೆರೆಗೆ ಬರ್ತಿರುವ ಚಿತ್ರಕ್ಕೆ ಮುರಳಿ ಜಿ ಕ್ಯಾಮರಾವರ್ಕ್ ಮಾಡಿದ್ದಾರೆ. ಜೇಕ್ಸ್ ಬಿಜೋಯ್ ಸಂಗೀತ ಕೊಟ್ಟಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!