ಆ ಇಬ್ಬರು ರಾಜಕಾರಣಿಗಳು, ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಜನ ಕಷ್ಟ ಅಂತ ಅವರೆದುರು ಬಂದಾಗ ಅವರಿಗೆ ತಕ್ಷಣ ಸ್ಪಂಧಿಸುವ ಗುಣ ಆ ಇಬ್ಬರು ಸಚಿವರಲ್ಲಿದೆ.
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗಿರುವ ಜಮೀರ್ ಅಹ್ಮದ ಖಾನ್ ಹಾಗೂ ಸಂತೋಷ ಲಾಡ್ ಇಬ್ಬರು ಕುಚುಕು ಗೆಳೆಯರು. ಜಮೀರ್ ಅಹ್ಮದ್ ಖಾನ್ ವಯಸ್ಸಿನಲ್ಲಿ ದೊಡ್ಡವರಾದರು ಸಹ ಇಬ್ಬರ ನಡುವಿನ ಸ್ನೇಹ ಅನನ್ಯ.
ಜನತಾದಳದಿಂದ ರಾಜಕೀಯ ಜರ್ನಿ ಆರಂಭಿಸಿರುವ ಸಂತೋಷ ಲಾಡ್ ಹಾಗೂ ಜಮೀರ್ ಅಹ್ಮದ್ ಖಾನ್ ಅವರ ನಡುವಿನ ಸ್ನೇಹ ಅಜರಾಮರ. ಇಬ್ಬರು ಪರಸ್ಪರ ಸಿಕ್ಕರೆ ಮುಗಿಯಿತು. ರಾಜಕೀಯ ಬದಿಗಿಟ್ಟು ಹರಟೆ ಹೊಡೆಯುತ್ತ, ಸ್ನೇಹಕ್ಕೆ ಮಾದರಿಯಾಗಿದ್ದಾರೆ.
