ನವಲಗುಂದ ಗುಡ್ಡದ ಮಣ್ಣಿನ ರಾಜಕೀಯ ರೈತ ಬಂಡಾಯದ ನಾಡಿನಲ್ಲಿ ಬಿಸಿ ಏರಿಸಿದೆ. ಗುಡ್ಡದ ಮಣ್ಣಿನ ವಿಷಯ ಇಬ್ಬರು ರಾಜಕೀಯ ದಿಗ್ಗಜರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ನವಲಗುಂದ ತಾಲೂಕಿನಲ್ಲಿ ಹೊಲದ ರಸ್ತೆಯ ಅಭಿವೃದ್ದಿ ಮಾಡುತ್ತಿದ್ದೇನೆ. ಅಭಿವೃದ್ಧಿಯೇ ನನ್ನ ಗುರಿ. ಯಾರು ಏನು ಹೇಳಿದರು ತಲೆಕೆಡಿಸಿಕೊಳ್ಳಲ್ಲ ಎಂದ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ, ಇನ್ನು ಇನ್ನೂರು ಕೋಟಿ ತರ್ತೇನೆ ಎಂದಿದ್ದಾರೆ. ನನ್ನದೇ ಸರ್ಕಾರ ಇದೆ, ಕೆಲಸದ ಬಗ್ಗೆ ರೈತರ ಹತ್ತಿರ ಕೇಳಲಿ ಎಂದಿದ್ದಾರೆ.
ಮತ್ತೊಂದು ಕಡೆ ಅಭಿವೃದ್ಧಿಗೆ ನನ್ನ ತಕರಾರಿಲ್ಲ ಎಂದಿರುವ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ನಡೆಸಿರುವ ಕಾಮಗಾರಿ ಕಾನೂನು ಬಾಹಿರವಾಗಿದೆ ಎಂದು ಆರೋಪ ಮಾಡಿದ್ದಾರೆ.
ನವಲಗುಂದದ ಗುಡ್ಡದ ಮಣ್ಣನ್ನು, ಗಣಿ ಇಲಾಖೆಯ ಅಗತ್ಯ ಅನುಮತಿ ಪಡೆಯದೇ 3 ಸಾವಿರ ಟಿಪ್ಪರನಷ್ಟು ಮಣ್ಣು ಬಳಕೆ ಮಾಡಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೆ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗುಡ್ಡದ ಮಣ್ಣಿನ ಆಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸದೆ ಇದ್ದಲ್ಲಿ, ಕಾನೂನು ಹೋರಾಟ ಮಾಡುವದಾಗಿ ಶಂಕರ ಪಾಟೀಲ ತಿಳಿಸಿದ್ದಾರೆ.
ಒಟ್ನಲ್ಲಿ ನವಲಗುಂದ ಗುಡ್ಡದ ಮಣ್ಣಿನ ವಿಚಾರ ಭುಗಿಲೆದ್ದಿದ್ದು, ಲ್ಯಾಂಡ ಆರ್ಮಿ ಅಧಿಕಾರಿಗಳು ಸರ್ಕಾರದ ನೀತಿ ಉಲ್ಲಂಘಿಸಿ ಸುಮಾರು 30 ಕೋಟಿ ಹಣ ತೆಗೆದಿದ್ದಾರೆ. ಅವರ ಮೇಲೆಯೂ ಕ್ರಮ ಕೈಗೊಳ್ಳುವಂತೆ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದ್ದಾರೆ.
ನವಲಗುಂದ ಗುಡ್ಡದ ಮಣ್ಣಿನ ವಿಷಯ ತಾರಕಕ್ಕೇರಿದ್ದು, ಹಾಲಿ ಹಾಗೂ ಮಾಜಿಗಳ ನಡುವೆ ವಾಕ್ಸಮರ ಮುಂದುವರೆದಿದೆ.
