ಜಿಂದಾಲ್ ಗೆ ಕಡಿಮೆ ದರದಲ್ಲಿ ಭೂಮಿ ನೀಡಿರುವ ಸಂಬಂಧ ಮಾಧ್ಯಮಗೋಷ್ಠಿ ನಡೆಸಿ ಆತುರದಲ್ಲಿ ಮನಸ್ಸಿಗೆ ನೋವಾಗುವಂತಹ ಮಾತನಾಡಿದ್ದ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ತಾನಾಡಿರುವ ಮಾತಿಗೆ ಸಿ ಎಂ ಬಳಿ ಕ್ಷಮೆಯಾಚಿಸಿದ್ದಾರೆ.
ಜಿಂದಾಲಗೆ ಕಡಿಮೆ ದರಕ್ಕೆ ಜಮೀನು ನೀಡಿದ್ದರ ಸಂಬಂಧ ಬೆಲ್ಲದ ಅವರು ಮಾತಿನ ಭರದಲ್ಲಿ ಸಿದ್ದರಾಮಯ್ಯನವರ ಮೇಲೆ ಮಾತಿನ ಪ್ರಹಾರ ನಡೆಸಿದ್ದರು.
” ಏನು ಅಪ್ಪನ ಮನೆ ಆಸ್ತಿನಾ” ಎಂಬ ಪದ ಬಳಕೆ ಮಾಡಿದ್ದರು. ಇದೀಗ ಆ ಮಾತಿಗೆ ಬೆಲ್ಲದ ಅವರು ಮುಖ್ಯಮಂತ್ರಿಗಳಿಗೆ ಕ್ಷಮೆಯಾಚನೆ ಮಾಡಿ, ದೊಡ್ಡವರಾಗಿದ್ದಾರೆ. ಅಲ್ಲದೆ ಸಾತ್ವಿಕ ರಾಜಕಾರಣಕ್ಕೆ ಮಾದರಿಯಾಗಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಮಾಧ್ಯಮಗೋಷ್ಠಿ ಸಿಎಂ ವಿರುದ್ಧ ಬೆಲ್ಲದ ಅವರು ಪದಬಳಕೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಿಎಂಗೆ ಪತ್ರ ಬರೆದು ಬೆಲ್ಲದ ಅವರು ಕ್ಷಮೆಯಾಚಿಸಿದ್ದಾರೆ.
