ರೇಲ್ವೆ ಗೇಟ್ ಕೇಬಲ್ ಕಟ್ ಆಗಿದ್ದರ ಪರಿಣಾಮ ಸಂಚಾರಕ್ಕೆ ಕೆಲ ಕಾಲ ತೊಂದರೆಯಾಗಿದೆ. ರೇಲ್ವೆ ನಿಲ್ದಾಣದ ಪಕ್ಕದಲ್ಲಿರುವ ಈ ಗೇಟ್ ಹಳಿಯಾಳ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ.
ರೈಲು ಹೋದ ಮೇಲೆ ಗೇಟ್ ತೆಗೆಯಲು ಹೋದ ರೇಲ್ವೆ ಗೇಟ್ ಸಿಬ್ಬಂದಿ ಕೇಬಲ್ ಕಟ್ ಆದ ಪರಿಣಾಮ ಪರದಾಡಿದ್ದಾರೆ.
ನಂತರ ಗೇಟನ್ನು ಕೈಯಿಂದ ಎತ್ತಿ ಹಿಡಿದು ವಾಹನ ಸವಾರರನ್ನು ದಾಟಿಸಲಾಯಿತು. ಈ ವೇಳೆ ರೈಲು ಹಳಿಯ ಮಧ್ಯೆಯೇ ಬೈಕ್ ಸವಾರರು ನಿಲ್ಲಬೇಕಾಯಿತು.
ಅರ್ಧ ಗಂಟೆ ನಂತರ ಸ್ಥಳಕ್ಕೆ ಬಂದ ರೇಲ್ವೆ ಇಲಾಖೆ ಸಿಬ್ಬಂದಿ ಗೇಟ್ ಕೇಬಲ್ ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ಘಟನೆ ನಡೆಯಿತು.
