ಧಾರವಾಡದಲ್ಲಿ ದೊಡ್ಡ ವ್ಯಾಪ್ತಿ ಹೊಂದಿರುವ ಉಪನಗರ ಪೂಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಸಡಗರ ಮನೆ ಮಾಡಿತ್ತು.
ಉಪನಗರ ಠಾಣೆಯಲ್ಲಿಂದು ನಡೆದ ಸತ್ಯನಾರಾಯಣ ಪೂಜೆಯಲ್ಲಿ ಎಲ್ಲಾ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಇನ್ಸಪೆಕ್ಟರ ದಯಾನಂದ ಸೇರಿದಂತೆ ಪಿಎಸ್ಐ, ಎಎಸ್ಐ, ಹವಾಲ್ದಾರ ಹಾಗೂ ಪೊಲೀಸ್ ಪೇದೆಗಳು ಒಂದೇ ಉಡುಗೆಯಲ್ಲಿ ಮಿಂಚಿದರು.
ಅಪರಾಧಿಕ ಚಟುವಟಿಕೆ ಹತ್ತಿಕ್ಕುವ ಕೆಲಸದಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿ ಇಂದು ವಿಘ್ನ ವಿನಾಶಕನ ಪೂಜೆ ಮಾಡಿ, ನಗರದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.
