ಕಳೆದೆರಡು ದಿನಗಳ ಹಿಂದೆ ಧಾರವಾಡದ ಕರ್ನಾಟಕ ವಿಶ್ವ ವಿಧ್ಯಾಲಯದ ಆವರಣದಲ್ಲಿ ಕಂಡು ಬಂದಿದ್ದ ಚಿರತೆ ನಾಯಿಯನ್ನು ಬಲಿ ಪಡೆದುಕೊಂಡಿದೆ ಎಂದು ಹೇಳಲಾಗಿದೆ.
ಹೊಯ್ಸಳ ನಗರದ ಪಕ್ಕ ಇರುವ ರವೀಂದ್ರ ನಗರದ ಬಸವರಾಜ ತಳವಾರ ಮನೆಯಲ್ಲಿದ್ದ ನಾಯಿಯನ್ನು ಚಿರತೆ ಎಳೆದೊಯ್ದಿದೆ.
ಮನೆಯ ಮುಂದುಗಡೆ ರಕ್ತ ಬಿದ್ದಿದ್ದನ್ನು ಗಮನಿಸಿದ ಬಸವರಾಜ ತಳವಾರ ಮತ್ತು ರವೀಂದ್ರ ನಗರದ ಜನ ಭಯಭೀತರಾಗಿದ್ದಾರೆ.
