ಹುಬ್ಬಳ್ಳಿ ಹೃದಯ ಭಾಗದಲ್ಲಿ ಇರುವ ಇದಗಾ ( ರಾಣಿ ಚೆನ್ನಮ್ಮ ) ಮೈದಾನದಲ್ಲಿ ವಿರಾಜಮಾನನಾಗಿದ್ದ ಗಣೇಶನಿಗೆ ಇಂದು ಅತ್ಯಂತ ಶೃದ್ದಾ, ಸಡಗರ, ಸಂಭ್ರಮದ ಮಧ್ಯೆ ವಿದಾಯ ಹೇಳಲಾಯಿತು.
ವಿಸರ್ಜನಾ ಕಾರ್ಯಕ್ರಮಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಕೇಸರಿ ದ್ವಜಗಳು ಮೆರವಣಿಗೆ ಉದ್ದಕ್ಕೂ ರಾರಾಜಿಸಿದವು.
ಬಿಗಿ ಭದ್ರತೆ ನಡುವೆ ಪ್ರತಿಷ್ಟಾಪನೆಗೊಂಡಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮದಲ್ಲಿ ಸಿ ಟಿ ರವಿ, ಮಹೇಶ ಟೆಂಗಿನಕಾಯಿ, ಶಂಕರ ಪಾಟೀಲ ಮುನೇನಕೊಪ್ಪ ಭಾಗವಹಿಸಿದ್ದರು.
