ನವಲಗುಂದ ತಾಲೂಕಿನ ರಾಜಕೀಯ ಇದೀಗ ಅಕ್ಷರಶ ರಣರಂಗವಾಗುತ್ತಿದೆ. ನವಲಗುಂದ ಗುಡ್ಡದ ಮಣ್ಣಿನ ವಿಷಯವಾಗಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ದ್ವನಿ ಎತ್ತಿದ್ದೆ ತಡ, ಸಾಮಾಜಿಕ ಜಾಲತಾಣಗಳಲ್ಲಿ ವಾಕ್ಸಮರ ಆರಂಭವಾಗಿದೆ.
ನವಲಗುಂದ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂದಿಸಿದಂತೆ, ದಿನಕ್ಕೊಂದು ಪೋಸ್ಟಗಳು ಹರಿದಾಡುತ್ತಿದ್ದಂತೆ, ಇದೀಗ ಶಾಸಕ ಎನ್ ಎಚ್ ಕೋನರೆಡ್ಡಿ ಪರ ಅವರ ಬೆಂಬಲಿಗರು ಬ್ಯಾಟಿಂಗ್ ಶುರು ಮಾಡಿದ್ದಾರೆ.
ಶಾಸಕ ಕೋನರೆಡ್ಡಿ ಅವರನ್ನು ಟೀಕಿಸುವುದು ಎಂದರೆ ಆನೆಗೆ ಶ್ವಾನ ಬೊಗಳಿದಂತೆ, ಆಕಾಶಕ್ಕೆ ಉಗುಳಿದಂತೆ ಎಂಬ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ.
