ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಹರಡುತ್ತಿದ್ದಂತೆ, ರಾಜಕಾರಣ ಮೈಕೊಡವಿಕೊಂಡು ನಿಂತಿದೆ.
ಅಂದ ಹಾಗೆ ಧಾರವಾಡದಲ್ಲಿಂದು ಕಾಂಗ್ರೇಸ್ಸಿನ ಇಬ್ಬರು ದಿಗ್ಗಜ ನಾಯಕರು ಒಟ್ಟಿಗೆ ಕುಳಿತು, ಚಹಾ ಸೇವಿಸಿದರು. ಕಾರ್ಯಕ್ರಮದ ನಿಮಿತ್ತ ಧಾರವಾಡದಲ್ಲಿಯೇ ಇದ್ದ ಕಾರ್ಮಿಕ ಸಚಿವ ಸಂತೋಷ ಲಾಡ್ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ, ಒಟ್ಟಿಗೆ ಕುಳಿತು ಚಹಾ ಸೇವಿಸಿದರು.
ಏನೋ ನಡೆದೈತಿ ಅನ್ನೋದನ್ನ ಸಾರಿ ಹೇಳುವ ಇಬ್ಬರು ನಾಯಕರ ಫೋಟೋವೊಂದು ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿದ್ದು, ರಾಜಕೀಯ ಬೆಳವಣಿಗೆ ಬಗ್ಗೆ ಇಬ್ಬರು, ಹಾಫ್ ಹಾಫ್ ಚಹಾ ಸೇವಿಸಿ, ಫುಲ್ ಮಾತುಕತೆ ನಡೆಸಿದರು ಎನ್ನಲಾಗಿದೆ.
ಮುಖ್ಯಮಂತ್ರಿ ಹುದ್ದೆಗೆ ಸತೀಶ ಜಾರಕಿಹೊಳಿಯವರ ಹೆಸರು ಕೇಳಿ ಬರುತ್ತಿದ್ದಂತೆ ಇಬ್ಬರು ನಾಯಕರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
