ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಡೀಸೆಲ್, ಪೆಟ್ರೋಲ್ ಟ್ಯಾಂಕರ್ ಗಳಿಗೆ ಹಗಲು ಹೊತ್ತಿನಲ್ಲಿ ಸಂಚರಿಸಲು ನಿರ್ಭಂಧ ಹೇರಿದ ಪರಿಣಾಮ, ನಾಳೆಯಿಂದ ಅನಿರ್ಧಾಷ್ಟಾವಧಿಗೆ ಸಂಚಾರ ಬಂದ್ ಮಾಡಲು ಟ್ಯಾಂಕರ್ ಮಾಲಿಕರ ಸಂಘ ತೀರ್ಮಾನಿಸಿದೆ.
ಹುಬ್ಬಳ್ಳಿಯಿಂದ ಹಾವೇರಿ, ಗದಗ, ಕೊಪ್ಪಳ, ಹೊಸಪೇಟೆ, ರಾಯಚೂರು, ಬೆಳಗಾವಿ, ವಿಜಯಪುರ, ಕಾರವಾರ, ಬಾಗಲಕೋಟೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಸಮಸ್ಯೆಯಾಗಲಿದೆ.
ಸಂಚಾರಿ ಪೊಲೀಸರು ಹಗಲು ಹೊತ್ತಿನಲ್ಲಿ ಡೀಸೆಲ್ ಟ್ಯಾಂಕರ್ ಗಳಿಗೆ ಸಂಚರಿಸಲು ಅವಕಾಶ ನೀಡದೆ ಇರೋ ಪರಿಣಾಮ, ಟ್ಯಾಂಕರ್ ಮಾಲೀಕರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಟ್ಯಾಂಕರ್ ಮಾಲೀಕರ ಸಂಘ ಅಸಮಾಧಾನ ಹೊರಹಾಕಿದ್ದಾರೆ.
