ಧಾರವಾಡದ ಪ್ರಸಿದ್ಧ ಮುರುಘಾಮಠದಲ್ಲಿ ಅನಾಗರಿಕ ಘಟನೆಯೊಂದು ನಡೆದು ಹೋಗಿದೆ.
ಇಬ್ಬರು ಬಾಲಕರು ಮಠದಲ್ಲಿ ಕಳ್ಳತನ ಮಾಡುತ್ತಿರುವ ದೃಶ್ಯ ಸಿ ಸಿ ಟಿ ವಿ ಯಲ್ಲಿ ಸೆರೆಯಾಗಿದ್ದೆ, ಇಬ್ಬರು ಬಾಲಕರನ್ನು ಅರೆಬೆತ್ತಲೆ ಮಾಡಲು ಕಾರಣ ಎನ್ನಲಾಗಿದೆ.
ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಇಬ್ಬರು ಬಾಲಕರನ್ನು ಅರೆಬೆತ್ತಲೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಕಳ್ಳತನ ಮಾಡಿದವರನ್ನು ಪೊಲೀಸರಿಗೆ ಒಪ್ಪಿಸುವದನ್ನು ಬಿಟ್ಟು, ಹೀಗೆ ಅರೆಬೆತ್ತಲೆ ಮಾಡಿ ಮಾನ ಹರಾಜು ಹಾಕಬಾರದಿತ್ತು ಅನ್ನೋದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
