ಕಳೆದ ಒಂದು ತಿಂಗಳಿನಿಂದ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಆವರಣದಲ್ಲಿ ಚಿರತೆಯೊಂದು ಓಡಾಡುತ್ತಿದ್ದು, ಅದನ್ನು ಸೆರೆ ಹಿಡಿಯಲು ರವಿವಾರ ಕಾರ್ಯಾಚರಣೆ ನಡೆಯಲಿದೆ.
ವಿವಿ ಆವರಣದಲ್ಲಿರುವ ಅಮರ ಜವಾನ ವೃತ್ತದಿಂದ ಗ್ರಂಥಾಲಯ ಮಾರ್ಗವಾಗಿ, ಮಲಪ್ರಭಾ ವಸತಿ ನಿಲಯದ ಕಡೆ ಓಡಾಡದಂತೆ ಕರ್ನಾಟಕ ವಿಶ್ವ ವಿದ್ಯಾಲಯ ನೋಟಿಸ್ ಹೊರಡಿಸಿ, ಮನವಿ ಮಾಡಿದೆ.
ಚಿರತೆ ಸೆರೆ ಹಿಡಿಯಲು ವಿಶೇಷ ತಂಡವೊಂದು ಬಂದಿದ್ದು, ರವಿವಾರ ಬೆಳಿಗ್ಗೆ 6 ರಿಂದ ಸೋಮವಾರ ಬೆಳಿಗ್ಗೆ 6 ರ ವರೆಗೆ ಸಂಚಾರ ನಿರ್ಭಂಧಿಸಿ ಆದೇಶ ಹೊರಡಿಸಿದೆ.
