Download Our App

Follow us

Home » ಅಪರಾಧ » ಅಣ್ಣಿಗೇರಿ ಉಗ್ರಾಣದಲ್ಲಿ ಕಳ್ಳತನ ಪ್ರಕರಣ. ಅಸಲಿ ಕಳ್ಳರ ಬಂದನವಾಗಲಿ – ಶಂಕರ ಪಾಟೀಲ ಮುನೇನಕೊಪ್ಪ

ಅಣ್ಣಿಗೇರಿ ಉಗ್ರಾಣದಲ್ಲಿ ಕಳ್ಳತನ ಪ್ರಕರಣ. ಅಸಲಿ ಕಳ್ಳರ ಬಂದನವಾಗಲಿ – ಶಂಕರ ಪಾಟೀಲ ಮುನೇನಕೊಪ್ಪ

ಅಣ್ಣಿಗೇರಿ ಉಗ್ರಾಣದಲ್ಲಿ ನಡೆದ ಕಡ್ಲಿ ಹಾಗೂ ಹೆಸರಿನ ಚೀಲ ಕಳ್ಳತನಕ್ಕೆ ಸಂಬಂದಿಸಿದಂತೆ ಅಸಲಿ ಕಳ್ಳರ ಬಂಧನವಾಗೋವರೆಗೂ ಹೋರಾಟ ನಡೆಸುವದಾಗಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದ್ದಾರೆ. 

ಉಗ್ರಾಣದ ಮ್ಯಾನೇಜರ್ ಬಂಧನವಷ್ಟೇ ಆಗಬಾರದು ಎಂದಿರುವ ಅವರು, ಇದರ ಹಿಂದಿರೋ ಪ್ರತಿಯೊಬ್ಬರನ್ನು ಬಂಧಿಸಬೇಕು ಎಂದಿದ್ದಾರೆ. 

ಅಣ್ಣಿಗೇರಿ ಪಟ್ಟಣದಲ್ಲಿನ ಸರಕಾರದ ಉಗ್ರಾಣದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಡಲೆ, ಹೆಸರು ಕಳ್ಳತನವಾದ ಪ್ರಕರಣದಲ್ಲಿ ಮ್ಯಾನೇಜರ್ ಅಶೋಕ ಮುಶಣ್ಣನವರ ಅವರನ್ನು ಬಂಧನ ಮಾಡಲಾಗಿದೆ 

ಇಷ್ಟಕ್ಕೆ ಇದು ಮುಗಿಯಬಾರದು ಎಂದಿರುವ ಅವರು, ಕಡಲೆ ಮತ್ತು ಹೆಸರು ಕಳುವು ಮಾಡಿಕೊಂಡು ಹೋಗಿರುವವರನ್ನು ಸಹ ಹೆಡಮುರಿಗೆ ಕಟ್ಟಬೇಕು ಎಂದು ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದ್ದಾರೆ.

ರೈತರು ತಮ್ಮ ಉಪಜೀವನಕ್ಕಾಗಿ ಉಗ್ರಾಣದಲ್ಲಿಟ್ಟಿದ್ದ 4150 ಚೀಲಗಳನ್ನ ಕದಿಯಲಾಗಿದೆ. ಈ ಕುರಿತು ಭೇಟಿ ನೀಡಿ, ತಪ್ಪಿತಸ್ಥರು ಬಂಧನವಾಗಬೇಕೆಂದು ಆಗ್ರಹಿಸಿದ್ದೆ ಅದು ಈಗ ಆಗಿದೆ. 

ಆದರೆ, ಇವುಗಳನ್ನ ಸಾಗಾಣೆ ಮಾಡಿದ, ಖರೀದಿಸಿದ ಮತ್ತು ಸಹಕಾರ ನೀಡಿದವರ ಬಂಧನ ಯಾವಾಗ ಎಂದು ಪ್ರಶ್ನಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಬಿಜೆಪಿ ಅಧ್ಯಕ್ಷನ ಕಪಾಳಕ್ಕೆ ಹೊಡೆದ ಪಿಎಸ್ಐ. ವಿಡಿಯೋ ವೈರಲ್

ಹೋಟೆಲ್ ಬಳಿ ಗುಂಪಾಗಿ ನಿಂತಿದ್ದ ಬಿಜೆಪಿ ಅಧ್ಯಕ್ಷನ ಮೇಲೆ ಪಿಎಸ್ಐ ಹಲ್ಲೆ ಮಾಡಿದ ಘಟನೆ ಚಿತ್ರದುರ್ಗದ ತುರುವನೂರು ಬಳಿ ನಡೆದಿದೆ. ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಎಂಬುವವರಿಗೆ

Live Cricket

error: Content is protected !!