ಸಾಂಸ್ಕ್ರತಿಕ ನಗರಿ ಧಾರವಾಡದಲ್ಲಿ ತಲೆ ಎತ್ತಬೇಕಾದ ಸುಸಜ್ಜಿತ ಗಾಂಧೀ ಭವನ ದಶಕ ಕಳೆದರು ಮುಗಿಯದೆ ಇರುವದು ಜನರ ಆಕ್ರೋಶಕ್ಕೆ ಗುರಿಯಾಗಿದೆ.
ಹೊಸ ಬಸ್ ನಿಲ್ದಾಣದ ಹಿಂದೆ ಇರುವ 29 ಗುಂಟೆ ಜಾಗೆಯಲ್ಲಿ ಗಾಂಧೀ ಭವನ ನಿರ್ಮಾಣಕ್ಕೆ ಸರ್ಕಾರ ಅಸ್ತು ಅಂದಿತ್ತು. ಅಲ್ಲದೇ 4 ಕೋಟಿ ಹಣ ಮಂಜೂರು ಮಾಡಿತ್ತು. ಜಿಲ್ಲಾಡಳಿತ ಸಹ 29 ಗುಂಟೆ ಜಮೀನು ನೀಡಿತ್ತು.
ಲ್ಯಾಂಡ್ ಆರ್ಮಿ ( KRIDL ) ನಿರ್ಮಾಣ ಕಾಮಗಾರಿಯ ಹೊಣೆ ಹೊತ್ತಿತ್ತು. 2014 ರಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು. 2014 ರಿಂದ ಕೆಲಸ ಆರಂಭಿಸಿದ್ದ ಲ್ಯಾಂಡ್ ಆರ್ಮಿ ಅಧಿಕಾರಿಗಳು ಕಮಿಷನ್ ಲೆಕ್ಕ ಹಾಕುತ್ತ ಕುಳಿತರು ಹೊರತಾಗಿ ದಶಕ ಕಳೆದರು ಕಾಮಗಾರಿ ಮುಗಿಸದಿರುವದು, ಅಧಿಕಾರಿಗಳ ಅಸಡ್ಡೆ ತೋರಿಸುತ್ತದೆ.
ಗಾಂಧೀ ಭವನದ ನಿರ್ಮಾಣ ಕಾಮಗಾರಿ ಕುಂಠಿತಗೊಂಡಿದ್ದರ ಕುರಿತು ಕರ್ನಾಟಕ ಫೈಲ್ಸ್ 6 ತಿಂಗಳ ಹಿಂದೆ ಸುದ್ದಿ ಬಿತ್ತರಿಸಿ, ಅಧಿಕಾರಿಗಳ ಗಮನ ಸೆಳೆದಿತ್ತು.
ಲ್ಯಾಂಡ್ ಆರ್ಮಿ ಅಧಿಕಾರಿಯಾಗಿರುವ ಸುಜಾತಾ ಕಾಳೆ, 2024 ರ ಅಕ್ಟೋಬರ್ 2 ರಂದು ಗಾಂಧೀ ಜಯಂತಿಯ ದಿನದಂದೆ ಭವನ ಉದ್ಘಾಟನೆಗೆ ಬೇಕಾದ ಎಲ್ಲಾ ಸಿದ್ಧತೆ ಮಾಡುವದಾಗಿ ಹೇಳಿದ್ದರು. ಆದರೆ ಇನ್ನೂವರೆಗೆ ಪೂರ್ಣಗೊಂಡಿಲ್ಲ.
ನಾಳೆ ಇಡೀ ದೇಶ ಗಾಂಧೀ ಜಯಂತಿ ಆಚರಣೆ ಮಾಡುತ್ತಿದೆ. ಆದರೆ ಒಂದು ದಶಕವಾದರು ಸಹ ಗಾಂಧೀ ಭವನದ ಕಾಮಗಾರಿ ಮುಗಿಯದಿರುವದು ಅಧಿಕಾರಿಗಳ ಬೇಜವಾಬ್ದಾರಿಗೆ ನಿದರ್ಶನವಾಗಿದೆ.
ಗಾಂಧೀ ಭವನದ ಒಳಗೆ ಕಲ್ಲಿನ ಗಾಂಧೀ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಆದನ್ನು ಮುಚ್ಚಲಾಗಿದೆ.
ನಮ್ಮ ಹೊಲ ನಮ್ಮ ರಸ್ತೆಗೆ ಕೇವಲ 5 ತಿಂಗಳ ಅವಧಿಯಲ್ಲಿ 30 ಕೋಟಿ ಬಿಡುಗಡೆ ಮಾಡುವ ಅಧಿಕಾರಿಗಳು, ಸರ್ಕಾರಿ ಕಚೇರಿಗಳ ನವಿಕರಣವನ್ನು ಒಂದು ವರ್ಷದ ಅವಧಿಯಲ್ಲಿಯೇ ಮಾಡಿ ಮುಗಿಸುತ್ತಾರೆ. ಆದರೆ ಗಾಂಧೀ ಭವನ ನಿರ್ಮಾಣದ ಬಗ್ಗೆ ಯಾಕೆ ಅಸಡ್ಡೆ ಎಂಬುದು ಗೊತ್ತಾಗಬೇಕಿದೆ.
ನಿಮ್ಮ ಕಾಳಜಿ ಮಾಡುವರು ಯಾರು ಧಾರವಾಡದಲ್ಲಿಲ್ಲ…. ಕ್ಷಮಿಸು ತಾತಾ !
ಮುಸ್ತಫಾ ಕುನ್ನಿಭಾವಿ
