ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಆಹಾರ ನಿರೀಕ್ಷಕರು ಅಂತೇಳಿ ಇಬ್ಬರು ಅಂಗಡಿಕಾರರಿಂದ ಹಣ ವಸೂಲಿ ಮಾಡುತ್ತಿರುವದು ಕಂಡು ಬಂದಿದೆ.
ಅಧಿಕಾರಿಗಳ ವೇಷದಲ್ಲಿ ಅಂಗಡಿಗಳಿಗೆ ಹೋಗುವ ಲಕ್ಷಣ ಎಂಬಾತ ಹಣ ವಸೂಲಿ ಮಾಡುತ್ತಿದ್ದಾನೆ ಎನ್ನಲಾಗಿದೆ. ಅಂಗಡಿ ಮಾಲೀಕರಿಗೆ ಲೈಸೆನ್ಸ್ ಇದೆಯಾ ಎಂದು ಕೇಳುವ ನಕಲಿ ಫುಡ್ ಇನ್ಸ್ಪೆಕ್ಟರ್ ಗಳು ಅವರಿಂದ 4 ರಿಂದ 5 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ.
Fssai ಅಧಿಕಾರಿಗಳಿಗೆ ಈ ಮಾಹಿತಿ ಸಿಕ್ಕಿದ್ದು, ಪೊಲೀಸ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ ಎನ್ನಲಾಗಿದೆ.
ಆಹಾರ ಉತ್ಪನ್ನಗಳ ಲೈಸೆನ್ಸ್ ಬೇಕಾದವರು ಅಧಿಕೃತವಾಗಿ ಹುದ್ದೆಯಲ್ಲಿರುವ ಧಾರವಾಡದಲ್ಲಿ ಅಲ್ತಾಫ ಹಾಗೂ ಹುಬ್ಬಳ್ಳಿಯಲ್ಲಿ ಪ್ರಕಾಶ ಮಲ್ಲಾಪುರ ಅವರನ್ನು ಸಂಪರ್ಕಿಸಬಹುದಾಗಿದೆ.