ಸುಡು ಸುಡು ಬೇಸಿಗೆ ಶುರುವಾಗಿದೆ. ಈ ಸಲ ಕುಡಿಯುವ ನೀರಿಗಾಗಿ ಮತ್ತು ಕೃಷಿ ಬಳಕೆಗಾಗಿ ನೀರಿನ ಕೊರತೆ ಕಾಣದಿರುವದು ಸ್ವಲ್ಪ ಸಮಾಧಾನದ ಸಂಗತಿಯಾಗಿದೆ.
ಅಕಾಲಿಕ ಹಾಗೂ ಸಕಾಲಿಕ ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ಭರ್ತಿಯಾಗಿವೆ.
ಮಲಪ್ರಭಾ ಜಲಾಶಯದಿಂದ ಪ್ರತಿದಿನ 194 ಕ್ಯೂಸೆಕ್ಸ್ ನೀರನ್ನು ಹುಬ್ಬಳ್ಳಿ ಧಾರವಾಡಕ್ಕೆ ಬಿಡಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಕುಡಿಯುವ ಉದ್ದೇಶಕ್ಕಾಗಿ ದಿನಕ್ಕೆ 245 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ
ಅಲ್ಲದೇ ಮಾರ್ಗ ಮಧ್ಯೆ ಇರುವ ಹಾರೋ ಬೆಳವಡಿ ಸೇರಿದಂತೆ 6 ಹಳ್ಳಿಗಳಿಗೂ ಮಲಪ್ರಭಾ ಜಲಾಶಯದಿಂದ ನೀರು ಹರಿಸಲಾಗುತ್ತಿದೆ.
ಈಗಾಗಲೇ ಮಲಪ್ರಭಾ ಜಲಾಶಯದಲ್ಲಿ 35 ಟಿ ಎಂ ಸಿ ನೀರು ಶೇಖರಣೆಗೊಂಡಿದ್ದು, ಇದಲ್ಲದೆ ಕೃಷಿಗಾಗಿ 2.5 ಟಿ ಎಂ ಸಿ ನೀರನ್ನು ಹರಿಸಲಾಗಿದೆ ಎಂದು ಕಾಡಾ ಅಧ್ಯಕ್ಷ ಸದುಗೌಡ ಪಾಟೀಲ ಕರ್ನಾಟಕ ಫೈಲ್ಸ್ ಗೆ ತಿಳಿಸಿದ್ದಾರೆ.
ಮಲಪ್ರಭಾ ಸಧ್ಯ ಮಲಪ್ರಭಾ ಜಲಾಶಯದಲ್ಲಿ 35 ಟಿ ಎಂ ಸಿ ನೀರು ಇದ್ದು, ನೀರಿಗಾಗಿ ಹಾಹಾಕಾರ ಪಡುವ ಅಗತ್ಯ ಇಲ್ಲ ಎನ್ನಲಾಗಿದೆ.
ಪ್ರಸ್ತುತ ಹುಬ್ಬಳ್ಳಿ ಧಾರವಾಡ ನಗರಗಳಿಗೆ ಮಲಪ್ರಭಾ ಅಣೆಕಟ್ಟಿನಿಂದ ದಿನಕ್ಕೆ 220 ಮಿಲಿಯನ್ ಲೀಟರ್ ಮತ್ತು ನೀರಸಾಗರ ಜಲಾಶಯದಿಂದ ದಿನಕ್ಕೆ 25 ಮಿಲಿಯನ್ ಲೀಟರ್ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಮಲಪ್ರಭಾ ಜಲಾಶಯವು ಹುಬ್ಬಳ್ಳಿ-ಧಾರವಾಡಕ್ಕೆ ನೀರಿನ ಪ್ರಾಥಮಿಕ ಮೂಲವಾಗಿದೆ.
ಅವಳಿ ನಗರಗಳಿಗೆ ವರ್ಷಕ್ಕೆ 2.17 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಆದ್ರೆ ಮಲಪ್ರಭಾ ಜಲಾಶಯದಲ್ಲಿ ಸಧ್ಯ 35 ಟಿ ಎಂ ಸಿ ಯಷ್ಟು ನೀರು ಇದೆ.
24×7 ನೀರು ಸರಬರಾಜು ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವ ಬ್ಯಾಂಕ್ ನೆರವಿನ ಯೋಜನೆಯು ಹುಬ್ಬಳ್ಳಿ-ಧಾರವಾಡದ ಎಲ್ಲಾ 82 ವಾರ್ಡ್‌ಗಳಿಗೆ 24×7 ನೀರು ಸರಬರಾಜು ಮಾಡುವ ಗುರಿಯನ್ನು ಹೊಂದಿದೆ. ಜೂನ್ 2025 1 ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.
ಮುಸ್ತಫಾ ಕುನ್ನಿಭಾವಿ
ಕರ್ನಾಟಕ ಫೈಲ್ಸ್