ನೆಚ್ಚಿನ ತಹಸೀಲ್ದಾರರ ನಿವೃತ್ತಿಯ ದಿನದ ಕಾರ್ಯಕ್ರಮವನ್ನು ಸ್ಮರಣಿಯವಾಗಿಸಲು ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯ ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾಡಬಾರದನ್ನು ಮಾಡಿ ಸುದ್ದಿಯಾಗಿದ್ದಾರೆ.
ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಲಾಲ್‌ಗಂಜ್ ನಲ್ಲಿರುವ ತಹಸೀಲ್ದಾರ್ ನಿವೃತ್ತರಾದ ಹಿನ್ನೆಲೆಯಲ್ಲಿ ಗಾಂಧಿ ಜಯಂತಿಯ ಮುನ್ನಾದಿನದಂದು ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಮಾರಂಭವನ್ನು ಅವಿಸ್ಮರಣೀಯವಾಗಿಸಲು ಕಂದಾಯ ಸಿಬ್ಬಂದಿ ವರ್ಣರಂಜಿತ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಬಾರ್ ಡ್ಯಾನ್ಸರ್ ಗಳನ್ನು ಕರೆಸಲಾಗಿತ್ತು. ಹಾಗೆ ಬಂದ ಬಾರ್ ಡ್ಯಾನ್ಸರ್ ಗಳು ಅರೆನಗ್ನ ಬಟ್ಟೆಯಲ್ಲಿ ಕುಣಿದರು.
ಮಹಿಳಾ ನರ್ತಕಿಯರು ಸೊಂಟ ಕುಲುಕಲು ಆರಂಭಿಸಿದಾಗ ಕುಡಿದ ಮತ್ತಿನಲ್ಲಿದ್ದ ಕೆಲ ಕಂದಾಯ ಇಲಾಖೆಯ ಸಿಬ್ಬಂದಿ ತಡೆಯಲಾರದೆ ನರ್ತಕಿಯರ ಸೊಂಟದ ಮೇಲೆ ಕೈಯಿಟ್ಟು ಕುಣಿದಾಡಿದರು.
ಈ ವಿಡಿಯೋ ಇದೀಗ ವೈರಲ್ ಆಗಿದ್ದು, ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿದೆ.
