ನಿರಂತರವಾಗಿ ಸುರಿದ ಮಳೆಯಿಂದಾಗಿ ವಿಜಯನಗರ ಜಿಲ್ಲೆಯಲ್ಲಿ ಬಹಳಷ್ಟು ಮನೆಗಳು ಜಖಂಗೊಂಡಿವೆ.
ಹೊಸಪೇಟೆ ತಾಲೂಕಿನ ದಾನಪುರ ಗ್ರಾಮದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಗ್ರಾಮದ ನಿವಾಸಿ, ಕ್ರೀಡಾಪಟು ಪ್ರಕಾಶ ಅವರು ಮನೆಯಲ್ಲಿದ್ದಾಗ, ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದೆ.
ಈ ಘಟನೆಯಲ್ಲಿ ಪ್ರಕಾಶ್ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ತಕ್ಷಣ ಸ್ಥಳಕ್ಕೆ ಬಂದ ಗ್ರಾಮಸ್ಥರು ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
