ನವಲಗುಂದ ಕ್ಷೇತ್ರದ ಕಾಂಗ್ರೇಸ್ ಶಾಸಕ ಎನ್ ಎಚ್ ಕೋನರೆಡ್ಡಿಯವರ ವಿರುದ್ಧ ಜಿಲ್ಲಾ ಪಂಚಾಯತಿಯ ಮಾಜಿ ಉಪಾಧ್ಯಕ್ಷ, ಕಾಂಗ್ರೇಸ್ ಮುಖಂಡ ಶಿವಾನಂದ ಕರಿಗಾರ ಗುಡುಗಿದ್ದಾರೆ.
ಅಣ್ಣಿಗೇರಿಯಲ್ಲಿ ರೈತ ಹೋರಾಟಗಾರನ ಕುರಿತು ಅಸಭ್ಯ ಪದಬಳಕೆ ಮಾಡಿದ ಶಾಸಕ ಎನ್ ಎಚ್ ಕೋನರೆಡ್ಡಿ, ರೈತರ ಹೆಸರು ಬಳಕೆ ಮಾಡಲು ನೈತಿಕತೆ ಉಳಿಸಿಕೊಂಡಿಲ್ಲಾ ಎಂದು ಆರೋಪಿಸಿದರು.
ಮಾಧ್ಯಮದ ಮೂಲಕ ಕೋನರೆಡ್ಡಿಯವರು ಸಾರ್ವಜನಿಕ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ ಅವರು, ಯಮನೂರಿನಲ್ಲಿ ನಡೆದ ಪೊಲೀಸ ಗಲಭೆಯಲ್ಲಿ ರೈತರ ಮೇಲೆ ಹಲ್ಲೆ ನಡೆದಾಗ ರೈತರ ಪರ ಎನ್ನುವ ಶಾಸಕರು ಊರು ಬಿಟ್ಟು ಹೋಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹೆಸರು ಹೇಳಿ ರಾಜಕೀಯ ಮಾಡಿಕೊಂಡು ಹೊರಟಿರುವ ಎನ್ ಎಚ್ ಕೋನರೆಡ್ಡಿಯವರು, ಹಸಿರು ಟವೆಲ್ ಧರಿಸುವದನ್ನು ಬಿಡಬೇಕು ಎಂದು ಶಿವಾನಂದ ಕರಿಗಾರ ಒತ್ತಾಯಿಸಿದರು.
