ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ, ಮಗ ಭರತ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಶಿಗ್ಗಾವಿ ಕ್ಷೇತ್ರದಲ್ಲಿರುವ ಲಿಂಗಾಯತ ಪಂಚಮಸಾಲಿ ಮುಖಂಡರ ಮನೆ ಮನೆಗೆ ತೆರಳುತ್ತಿರುವ ಬಸವರಾಜ ಬೊಮ್ಮಾಯಿ, ಪುತ್ರ ಭರತ ಬೊಮ್ಮಾಯಿಗೆ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.
ಸಂಸದನಾದ ಬಳಿಕ ಹಾವೇರಿ ಹಾಗೂ ಗದಗ ಕಡೆಗೆ ಲಕ್ಷ ವಹಿಸಿದ್ದರಿಂದ ಶಿಗ್ಗಾವಿಗೆ ಬರುವದು ಸ್ವಲ್ಪ ಕಡಿಮೆಯಾಗಿದೆ. ಹಾಗಾಗಿ ತಪ್ಪು ತಿಳುವಳಿಕೆಯಾಗಿತ್ತು. ಈಗ ಅದೆಲ್ಲವೂ ಸರಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೇಸ್ ಸರ್ಕಾರದ ಯಾವ ಗ್ಯಾರೆಂಟಿ ಯೋಜನೆಗಳು ಚುನಾವಣೆಯಲ್ಲಿ ಕೈಹಿಡಿಯುವದಿಲ್ಲ ಎಂದಿರುವ ಅವರು, ನನಗಿಂತ ಹೆಚ್ಚು ಬೆಂಬಲ ಮಗನಿಗೆ ವ್ಯಕ್ತವಾಗುತ್ತಿದೆ ಎಂದರು.
ಇಡೀ ಕಾಂಗ್ರೇಸ್ ಸರ್ಕಾರ ಶಿಗ್ಗಾವಿಗೆ ಬಂದರು, ಬಿಜೆಪಿ ಇಲ್ಲಿ ಗೆಲ್ಲುತ್ತದೆ ಎಂದಿದ್ದಾರೆ. ಎಲ್ಲಾ ಕಾಂಗ್ರೇಸ್ ಮುಖಂಡರು ಶಿಗ್ಗಾವಿಗೆ ಬರುವದಾದರೆ ಅವರಿಗೆಲ್ಲ ಸ್ವಾಗತ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಟಿಕೇಟ್ ಘೋಷಣೆಯಾದ ಬಳಿಕ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದ್ದು, ಬಸವರಾಜ ಬೊಮ್ಮಾಯಿ ಡ್ಯಾಮೇಜ್ ಕಂಟ್ರೋಲ್ ದಲ್ಲಿ ತೊಡಗಿದ್ದಾರೆ.
ಮಗನಿಗೆ ಟಿಕೇಟ್ ಕೊಡಿಸಿದರು ಎಂದು ಅಸಮಾಧಾನ ಹೊಂದಿ, ದೂರ ಉಳಿದಿರುವ ಬಿಜೆಪಿ ಮುಖಂಡ ದುಂಡಿಗೌಡರ ಮನೆಗೂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.