ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಳ್ಳಾರಿ ಜೈಲಿನಲ್ಲಿರುವ ಚಿತ್ರನಟ ದರ್ಶನಗೆ ಹೈಕೋರ್ಟ ಚಿಕಿತ್ಸೆಗೆಂದು 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ.
131 ದಿನಗಳ ಕಾಲ ಜೈಲಿನಲ್ಲಿದ್ದ ದಾಸ ದೀಪಾವಳಿ ಮನೆಯಲ್ಲಿಯೇ ಆಚರಿಸಿಕೊಳ್ಳಲಿದ್ದಾರೆ. ಹೈಕೋರ್ಟ ಏಕಸದಸ್ಯ ಪೀಠ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಇಂದು ಅಥವಾ ನಾಳೆ ದಾಸ ಜೈಲಿನಿಂದ ಹೊರಗೆ ಬರಲಿದ್ದಾರೆ.
