ತೀವ್ರ ಕುತೂಹಲ ಮೂಡಿಸಿದ್ದ ಶಿಗ್ಗಾವ ಕ್ಷೇತ್ರದ ಉಪ ಚುನಾವಣೆಯಲ್ಲಿ ಉಂಟಾಗಿದ್ದ ಕಾಂಗ್ರೇಸ್ಸಿನ ಗೊಂದಲ ಶಮನಗೊಂಡಿದೆ.
ಪಕ್ಷದ ನಿರ್ಣಯದ ವಿರುದ್ಧ ಅಸಮಾಧಾನಗೊಂಡು, ಬಂಡೆದಿದ್ದ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ನಾಮಪತ್ರ ವಾಪಸ ಪಡೆದಿದ್ದಾರೆ.
ಖಾದ್ರಿಯವರು ಸಚಿವ ಜಮೀರ್ ಅಹ್ಮದ ಖಾನ್ ಜೊತೆ ತಡಸ ಕ್ರಾಸ ಬಳಿ ಬರುತ್ತಿದ್ದಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಭೇಟಿ ಮಾಡಿ, ನಡೆದ ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.
ಅಲ್ಲಿಂದ ನೇರವಾಗಿ ಚುನಾವಣಾಧಿಕಾರಿಗಳ ಕಚೇರಿಗೆ ಹೋದ ಖಾದ್ರಿಯವರು ನಾಮಪತ್ರ ವಾಪಸ ಪಡೆದಿದ್ದು, ಇಂದಿನಿಂದ ಕಾಂಗ್ರೇಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ ಜೊತೆ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
