ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ, ಗರಗ ಸೇರಿದಂತೆ ಹಲವೆಡೆ ರೈತರ ಪಹಣಿ ಪತ್ರದಲ್ಲಿ ವಖ್ಫ್ ಹೆಸರು ಕುಳಿತಿದ್ದನ್ನು ಖಂಡಿಸಿ ಧಾರವಾಡದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ತಹಸೀಲ್ದಾರ್ ಕಚೇರಿಯ ಮುಂದೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಅಜ್ಜ ಮುತ್ತಜ್ಜರಿಂದ ಜಮೀನಿನಲ್ಲಿ ಉಳುಮೆ ಮಾಡುತ್ತಾ ಬಂದಿರುವ ರೈತರಿಗೆ ಸರ್ಕಾರ ಬರ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೀಗ ರೈತರ ಭೂಮಿಯ ಪಹಣಿ ಪತ್ರದಲ್ಲಿ ವಖ್ಫ್ ಹೆಸರು ಧಾಖಲಾಗಿದ್ದು, ಕೂಡಲೇ ವಖ್ಫ್ ಹೆಸರನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಶಂಕರ ಕುಮಾರದೇಸಾಯಿ, ಕಂಬಳಿ ಸೇರಿದಂತೆ ಹಲವು ನಾಯಕರು ಹಾಗೂ ರೈತ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.
