ಕನ್ನಡಿಗರ ಹಬ್ಬ, ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಹೊಲ್ತಿಕೋಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು.
ದ್ವಜಾರೋಹಣದ ಬಳಿಕ, ಶಾಲಾ ಆವರಣದಲ್ಲಿ ಶಿಕ್ಷಕಿ ಶಶಿಕಲಾ ರಾಥೋಡ ಮಕ್ಕಳೊಂದಿಗೆ “ಜೀವ ಕಣೋ ಕನ್ನಡ, ದೈವ ಕಣೋ ಕನ್ನಡ ” ಎಂಬ ಹಾಡಿಗೆ ಡಾನ್ಸ್ ಮಾಡಿ ಗಮನ ಸೆಳೆದರು.
ಶಶಿಕಲಾ, ಹೊಲ್ತಿಕೋಟಿಯ ಸರ್ಕಾರಿ ಕನ್ನಡ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ಇಡೀ ಗ್ರಾಮಸ್ಥರು ಅವರನ್ನು ಅಭಿನಂದಿಸಿದ್ದಾರೆ.
