ಶಿಗ್ಗಾವಿ ಸವಣೂರು ಉಪ ಚುನಾವಣೆಗೆ ಇನ್ನೇರೆಡು ದಿನ ಬಾಕಿ ಇರುವಂತೆ ಅಲ್ಲಿನ ರಾಜಕಾರಣ ಸದ್ದು ಮಾಡುತ್ತಿದೆ. ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಗ ಭರತ ಬೊಮ್ಮಾಯಿ ಪರ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಂದು ಅಬ್ಬರದ ಪ್ರಚಾರ ನಡೆಸಿದ್ರು
ಮಂತ್ರೋಡಿಯಲ್ಲಿ ಮುಸ್ಲಿಮ್ ಸಮುದಾಯದವರ ಮೇಲೆ ಮುಗಿ ಬಿದ್ದ ಯತ್ನಾಳ, ಬಿಜೆಪಿಗೆ ಮುಸ್ಲಿಮ್ ಮತಗಳು ಬೇಡವೇ ಬೇಡ ಎಂದು ಬಹಿರಂಗವಾಗಿಯೇ ಹೇಳಿದರು.
ನಾಲಿಗೆ ಹರಿಬಿಟ್ಟ ಶಾಸಕ ಯತ್ನಾಳ, ಗಡ್ಡ, ಬುರ್ಖಾ ಹಾಕಿಕೊಂಡವರನ್ನು ಮನೆ ಒಳಗೆ, ಕಚೇರಿ ಒಳಗೆ ಕರೆದುಕೊಳ್ಳಬೇಡಿ ಎಂದ ಯತ್ನಾಳ್, ಹಿಂದುಗಳೆಲ್ಲ ಒಂದಾಗಬೇಕು ಎಂದಿದ್ದು, ಜಾತ್ಯಾತೀತವಾಗಿ ಬೊಮ್ಮಾಯಿಯವರಿಗೆ ಬರುತ್ತಿದ್ದ ಮುಸ್ಲಿಮ್ ಹಾಗೂ ಇನ್ನಿತರೇ ಮತಗಳಿಗೆ ಯತ್ನಾಳ ಮಾತಿನಿಂದ ಕತ್ತರಿ ಬೀಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
