ಮೊಬೈಲ್ ಗೀಳು ಮನೆಯ ನೆಮ್ಮದಿ ಹಾಳು ಮಾಡಿದೆ. ಬಹುತೇಕ ಬಳಕೆದಾರರು ದಿನಕ್ಕೆ 8 ಗಂಟೆ ಮೊಬೈಲ್ ನಲ್ಲಿಯೇ ಕಳೆಯುತ್ತಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಅಂಬಲಿಗೊಳ್ಳ ಗ್ರಾಮದಲ್ಲಿ ನಿನ್ನೇ ಭೀಕರ ಘಟನೆಯೊಂದು ನಡೆದಿದೆ. ಪತಿಯೊಬ್ಬ ಹೆಂಡತಿಗೆ ಊಟ ಕೊಡು ಎಂದು ಕೇಳಿದ್ದಾನೆ. ಗಂಡನ ಮಾತನ್ನು ಕೇಳಿಸಿಕೊಳ್ಳದೇ ಮೊಬೈಲ್ ನಲ್ಲಿ ಬಿಜಿಯಾಗಿದ್ದ ಹೆಂಡತಿ ಜೊತೆ ಜಗಳ ಆರಂಭವಾಗಿದೆ.
ಫೋನ್ ನಲ್ಲಿ ಕುಳಿತಿದ್ದ ಪತ್ನಿ ಗೌರಮ್ಮ ಸಧ್ಯ ಊಟ ಕೊಡುವುದಿಲ್ಲ, ಬೇಕಾದರೆ ನೀನೇ ನಿನ್ನ ಕೈಯಾರೆ ಹಾಕಿಕೊಂಡು ಊಟ ಮಾಡು ಎಂದು ಹೇಳಿದ್ದಾಳೆ. ಇಷ್ಟಕ್ಕೆ ಸುಮ್ಮನಾಗಿದ್ದಾರೆ ಕೊಲೆ ನಡೆಯಬೇಕೇನೋ, ಆದರೆ ಅರ್ಧ ಗಂಟೆಯಾದರೂ ಪತ್ನಿ ಊಟ ಕೊಡದೆ ಇದ್ದಾಗ ಸಿಟ್ಟಿಗೆದ್ದ ಪತಿ ಮನು ಎಂಬಾತ, ತನ್ನ ಪತ್ನಿಗೆ ಟವೆಲ್ ನಿಂದ ಕುತ್ತಿಗೆ ಹಿಸುಕಿ, ನೇಣು ಹಾಕಿದ್ದಾನೆ.
ಶಿಕಾರಿಪುರ ಪ್ರಕರಣದ ಧಾಖಲಿಸಿಕೊಂಡಿದ್ದು, ಆರೋಪಿ ಮನು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
