ಪಕ್ಷಿ ಪ್ರೀಯನೊಬ್ಬ ಪ್ರತಿ ದಿನ 16 ಸಾವಿರ ಗಿಳಿಗಳಿಗೆ ಆಹಾರ ಹಾಕುತ್ತಿದ್ದಾರೆ ಅಂದ್ರೆ ನೀವು ನಂಬುತ್ತಿರಾ? ನಂಬಲೇ ಬೇಕು ಅಂತಹ ವಿಶಾಲ ಮನಸ್ಸಿನ ವ್ಯಕ್ತಿಯೊಬ್ಬರು ಚೆನ್ನೈನಲ್ಲಿದ್ದಾರೆ.
ಅಂದ ಹಾಗೇ ಆ ಪಕ್ಷಿ ಪ್ರಿಯರ ಹೆಸರು ಸುದರ್ಸೋನ್ಸಾ ಸಾಹ. ಚೆನ್ನೈ ಮೂಲದ ಇವರು ಕಳೆದ 15 ವರ್ಷಗಳಿಂದ ಗಿಳಿಗಳಿಗೆ ಆಹಾರ ನೀಡುತ್ತಾ ಬಂದಿದ್ದಾರೆ. ಇವರು ದಿನನಿತ್ಯ ಸುಮಾರು 16 ಸಾವಿರ ಗಿಳಿಗಳಿಗೆ ಆಹಾರ ನೀಡುತ್ತಿದ್ದು, ದೊಡ್ಡ ಹೆಸರು ಮಾಡಿದ್ದಾರೆ.
ಸುದರ್ಸೋನ್ಸಾ ಸಾಹ, ಕಾಳು ಕಡಿ ತರುತ್ತಿದ್ದಂತೆ ಸಾವಿರ ಸಂಖ್ಯೆಯಲ್ಲಿರುವ ಗಿಳಿಗಳು ಅವರಿದ್ದಲ್ಲಿಗೆ ಬಂದು ಆಹಾರ ಸ್ವೀಕರಿಸುತ್ತವೆ. ಸುದರ್ಸೋನ್ಸಾ ಸಾಹ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತವಾಗಿದ್ದು, ಪಕ್ಷಿ ಪ್ರಿಯರು ಸುದರ್ಸೋನ್ಸಾ ಸಾಹಗೆ ಸಾಥ ನೀಡುತ್ತಿದ್ದಾರೆ.
ಬ್ರಹ್ಮಚಾರಿಯಾಗಿರುವ ಸುದರ್ಸೋನ್ಸಾ ಸಾಹ ತಂದೆಯನ್ನು ಕಳೆದುಕೊಂಡ ಬಳಿಕ ಗಿಳಿಗಳನ್ನು ಪ್ರೀತಿ ಮಾಡತೊಡಗಿದರು. ಪ್ರತಿ ದಿನ ಮನೆಯ ಮಹಡಿಗೆ ಬರುತ್ತಿದ್ದ ಗಿಳಿಗಳಿಗೆ ಆಹಾರ ಹಾಕತೊಡಗಿದರು.
ಸುದರ್ಸೋನ್ಸಾ ಸಾಹ ಅವರು ತಮ್ಮ ಆದಾಯದ ಶೇಕಡಾ 80 ರಷ್ಟು ಹಣವನ್ನು ಗಿಳಿಗಳಿಗೆ ವೆಚ್ಚ ಮಾಡುವ ಮೂಲಕ ಚೆನ್ನೈನಲ್ಲಿ ಅವರಿಗೆ ಪಕ್ಷಿಗಳ ಮನುಷ್ಯ ಎಂದು ಕರೆಯಲಾಗುತ್ತದೆ.
