Download Our App

Follow us

Home » ಕರ್ನಾಟಕ » ಮೈಸೂರಿನ ಮೂಡಾ ಪ್ರಕರಣದ ಬಳಿಕ ಹುಬ್ಬಳ್ಳಿ ಧಾರವಾಡದ “ಹುಡಾ” ಹಗರಣದ ಸದ್ದು… 50 / 50

ಮೈಸೂರಿನ ಮೂಡಾ ಪ್ರಕರಣದ ಬಳಿಕ ಹುಬ್ಬಳ್ಳಿ ಧಾರವಾಡದ “ಹುಡಾ” ಹಗರಣದ ಸದ್ದು… 50 / 50

ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದ ಮೈಸೂರಿನ ಮೂಡಾ ಪ್ರಕರಣ ತನಿಖಾ ಹಂತಕ್ಕೆ ಬರುತ್ತಿದ್ದಂತೆ, ಇದೀಗ ಹುಬ್ಬಳ್ಳಿ ಧಾರವಾಡದ “ಹುಡಾ” ದಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದ್ದರ ಬಗ್ಗೆ ಒಂದೊಂದೆ ಮಾಹಿತಿ ಬಯಲಾಗತೊಡಗಿದೆ. 

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ, ಅಧಿಕಾರಿಗಳು ಸೇರಿದಂತೆ ರಾಜಕಾರಣಿಗಳು ಪ್ರಭಾವ ಬೀರಿ, ಕೆಲವು ನಿವೇಶನಗಳನ್ನು ಕಾನೂನು ಬಾಹಿರವಾಗಿ ಪಡೆದಿದ್ದರ ಬಗ್ಗೆ ಧಾಖಲೆಗಳು ಮಾತನಾಡುತ್ತಿವೆ. ಸತ್ತೂರು, ಲಕ್ಕಮ್ಮನಹಳ್ಳಿಯಲ್ಲಿಯೂ ಸಂಘ ಸಂಸ್ಥೆಗಳ ಹೆಸರಲ್ಲಿ ನಿಯಮ ಮೀರಿ ನಿವೇಶನ ನೀಡಲಾಗಿದೆ 

ಮಹತ್ವದ ಮಾಹಿತಿ  ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿದ್ದು, ಹುಬ್ಬಳ್ಳಿಯ ಲಿಂಗರಾಜ ನಗರ, ಕೇಶ್ವಾಪುರ,  ಧಾರವಾಡದ ಕೆಲಗೇರಿ ರಸ್ತೆ, ಸಾಧನಕೇರಿ, ಸಂಪಿಗೆ ನಗರ ಸೇರಿದಂತೆ, ಮೃತ್ಯುಂಜಯ ನಗರದಲ್ಲಿದ್ದ ನಿವೇಶನಗಳನ್ನು ಪರಬಾರೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. 

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇರುವ ಬಹುತೇಕ ಅಧಿಕಾರಿ ಹಾಗೂ ಸಿಬ್ಬಂದಿ, ಮತ್ತು ಅಧಿಕಾರ ನಡೆಸಿ ಹೋದ ಬಹುತೇಕ ಹುಡಾ ಅಧ್ಯಕ್ಷರು ಸದಸ್ಯರುಗಳು ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಒಟ್ಟಿನಲ್ಲಿ “ಮೂಡಾ” ಪ್ರಕರಣ ಬಳಿಕ, ಇದೀಗ “ಹುಡಾ ” ಹಗರಣದ ಒಂದೊಂದೆ ಮಾಹಿತಿ ಸೋರಿಕೆಯಾಗುತ್ತಿದೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!