ಇಡೀ ದೇಶದ ಗಮನ ಸೆಳೆದಿದ್ದ ಕೊಪ್ಪಳದ ಮರಕುಂಬಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 98 ಜನರಿಗೆ ಧಾರವಾಡ ಹೈಕೋರ್ಟ ಜಾಮೀನು ಮಂಜೂರು ಮಾಡಿದೆ.
ದಲಿತರ ಮೇಲೆ ನಡೆದ ದೌರ್ಜನ್ಯದ ಕುರಿತು ವಿಚಾರಣೆ ನಡೆಸಿದ್ದ ಕೊಪ್ಪಳದ ಜಿಲ್ಲಾ ನ್ಯಾಯಾಲಯ, ಆರೋಪಿತರಿಗೆ ೧೪ ವರ್ಷ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು.
ಜಿಲ್ಲಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟನಲ್ಲಿ ಪ್ರಶ್ನಿಸಿದ್ದ ಆರೋಪಿತರ ಪರ ವಕೀಲ ಆನಂದ ಕೊಳ್ಳಿ, ಕಡೆಗೂ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಂದೆ ಈ ಅಪರಾಧಿಗಳು ಜಾಮೀನಿನ ಮೇಲೆ ಇದ್ದಾಗ ಯಾವುದೇ ಜಾಮೀನಿನ ಶರತ್ತುಗಳನ್ನ ಮುರಿದಿರಲಿಲ್ಲ, ಹಾಗಾಗಿ ಜಾಮೀನು ನೀಡುವಂತೆ ಹೈಕೋರ್ಟ ಗಮನಕ್ಕೆ ತರಲಾಗಿತ್ತು. ಇದೀಗ ಧಾರವಾಡ ಹೈಕೋರ್ಟನ ವಿಭಾಗೀಯ ಪೀಠ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎಲ್ಲರಿಗೂ ಜಾಮೀನು ಮಂಜೂರು ಮಾಡಿದೆ.