ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ ಪೆಲತ್ತಡ್ಕ, ಪ್ರಭಾವತಿ ದೇಸಾಯಿ, ವೀರೇಂದ್ರ ರಾವಿಹಾಳ್, ಪೂರ್ಣಿಮಾ ಮಾಳಗಿಮನಿ, ದ್ವಾರನಕುಂಟೆ ಪಾತಣ್ಣ, ಗುರುಪ್ರಸಾದ ಕಂಟಲಗೆರೆ, ಡಾ.ಪರವಿನ ಸುಲ್ತಾನಾ, ಡಾ.ಪ್ರಕಾಶ ಭಟ್, ಡಾ.ಎಚ್.ಎಸ್.ಸತ್ಯನಾರಾಯಣ ಹಾಗೂ ಮಂಜುನಾಥ ಚಾಂದ್ ಅವರ ಕೃತಿಗಳು ಆಯ್ಕೆಯಾಗಿವೆ ಎಂದು `ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ವಿದ್ಯಾರಶ್ಮಿ ಪೆಲತ್ತಡ್ಕ ಅವರ, (ಕೆರೆ-ದಡ), ಪ್ರಭಾವತಿ ದೇಸಾಯಿಯವರ (ಸೆರಗಿಗಂಟಿದ ಕಂಪು), ವೀರೇಂದ್ರ ರಾವಿಹಾಳ ಅವರ (ಡಂಕಲ್ ಪೇಟೆ), ಪೂರ್ಣಿಮಾ ಮಾಳಗಿಮನಿ ಅವರ (ಮ್ಯಾಜಿಕ್ ಸೌಟು), ದ್ವಾರನಕುಂಟೆ ಪಾತಣ್ಣ ಅವರ (ರಾಣಿ ಅಹಲ್ಯಾಬಾಯಿ ಹೋಳ್ಕರ್), ಗುರುಪ್ರಸಾದ ಕಂಟಲಗೆರೆ ಅವರ (ಅಟ್ರಾಸಿಟಿ), ಡಾ.ಪರವಿನ ಸುಲ್ತಾನಾ ಅವರ (ಶರಣರ ನಾಡಿನ ಸೂಫಿ ಮಾರ್ಗ), ಡಾ.ಪ್ರಕಾಶ ಭಟ್ ಅವರ (ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ), ಡಾ.ಎಚ್.ಎಸ್.ಸತ್ಯನಾರಾಯಣ ಅವರ (ಬಿದಿರ ತಡಿಕೆ) ಹಾಗೂ ಮಂಜುನಾಥ ಚಾಂದ ಅವರ (ಪ್ರಿಯ ಮೀರಾ) ಕೃತಿಗಳನ್ನು ೨೪ ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ 2500 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ಇದೇ ನವೆಂಬರ್ 26 ರಂದು ಸಂಜೆ 5.3.ಕ್ಕೆ ಸೇಡಮ್‌ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ.
