ದೇಶದ ಅತ್ಯುನ್ನತ ಶೈಕ್ಷಣಿಕ ಸಂಸ್ಥೆಯಾಗಿರುವ ರೂರ್ಕಿ IIT ಸಂಸ್ಥೆಯಲ್ಲಿ ಧಾರವಾಡದ ಇಸ್ಮಾಯಿಲ್ ತಮಟಗಾರ ಮಗಳು ನಾಜನೀನ್, ವಾಸ್ತುಶಿಲ್ಪ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.
ಸಂಸ್ಥೆಯ ನಿರ್ದೇಶಕ ನವೀನ್ ಕೆ ನಾವಿನ್, ನಾಜನೀನ್ ತಮಟಗಾರಳಿಗೆ ಪ್ರಶಸ್ತಿ ನೀಡಿ ಅಭಿನಂಧಿಸಿದ್ದಾರೆ. ನಾಜನೀನ್ ಪ್ರೌಡಶಾಲೆಯಿಂದ ಇಲ್ಲಿಯವರೆಗೆ ಉತ್ತಮ ಅಂಕಗಳನ್ನು ಪಡೆದು ಧಾರವಾಡಕ್ಕೆ ಕೀರ್ತಿ ತಂದ ಪ್ರತಿಭಾವಂತ ವಿಧ್ಯಾರ್ಥಿಯಾಗಿದ್ದಾಳೆ.
