ಹುಬ್ಬಳ್ಳಿ ಧಾರವಾಡ ನಗರಗಳ ಮಧ್ಯೆ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ BRTS ರಸ್ತೆ, ಧಾರವಾಡಕ್ಕೆ ಶಾಪವಾಗಿ ಪರಿಣಮಿಸಿದೆ.
BRTS ಯೋಜನೆ ಅನುಷ್ಟಾನದ ಸಂದರ್ಭದಲ್ಲಿ ಪರ್ಸೆಂಟೇಜ ತಿಂದು ಬಾಯಿ ಒರೆಸಿಕೊಂಡಿರುವ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳಿಗೆ ಜನ ಇದೀಗ ಕ್ಯಾಕರಿಸಿ ಉಗುಳುತ್ತಿದ್ದಾರೆ.
BRTS ಯೋಜನೆ ಬಂದ ಮೇಲೆ ಸಂಚಾರಿ ಪೊಲೀಸ್ ಠಾಣೆಯ ಆದಾಯವು ಹೆಚ್ಚಾಗಿದೆ ಎನ್ನಲಾಗಿದೆ. ಇದಕ್ಕೆ ಕಾರಣವೂ ಇದೆ. ಧಾರವಾಡದಲ್ಲಿ ಎದ್ವಾ ತದ್ವಾ ರೀತಿಯಲ್ಲಿ, ಬಿ ಆರ್ ಟಿ ಎಸ್ ರಸ್ತೆ ನಿರ್ಮಾಣವಾಗಿದ್ದು, ಚಿಗರಿ ಬಸ್ಸುಗಳಿಗೆ ಮಾತ್ರ ಈ ರಸ್ತೆ ಮೀಸಲಿಡಲಾಗಿದೆ.
ಅಪ್ಪಿ ತಪ್ಪಿ ಈ ರಸ್ತೆಯಲ್ಲಿ ಖಾಸಗಿ ವಾಹನಗಳು ಸಂಚರಿಸಿದ್ರೆ 500 ರೂಪಾಯಿ ದಂಡ ವಿಧಿಸಲಾಗುತ್ತಿದೆ.
ಸಂಚಾರ ದಟ್ಟನೆಯಿಂದಾಗಿ ಅಥವಾ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಕೆಲ ಸಲ ಖಾಸಗಿ ವಾಹನಗಳನ್ನು BRTS ರಸ್ತೆಯಲ್ಲಿ ಸಂಚರಿಸಲು ಹೇಳುವ ಸಂಚಾರಿ ಪೊಲೀಸರು, ನಂತರ ಆ ರಸ್ತೆಯಲ್ಲಿ ವಾಹನ ಸಂಚರಿಸಿದೆ, ರಸ್ತೆ ಸಂಚಾರಕ್ಕೆ ಅಡೆತಡೆಯಾಗಿದೆ ಎಂದು ಆರೋಪ ಹೊರಿಸಿ, 500 ರೂಪಾಯಿ ದಂಡ ವಿಧಿಸುತ್ತಾರೆ.
ಸಾರ್ವಜನಿಕರ ವಾಹನಗಳ ಓಡಾಟಕ್ಕೆ ರಸ್ತೆ ಕಿರಿದಾಗಿದ್ದು, ಅಂತದರಲ್ಲಿಯೇ ಬೇಂದ್ರೆ ಬಸ್ಸುಗಳು ಎಲ್ಲೆಂದರಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ. ಆದರೆ ಆ ಬಸ್ಸುಗಳ ಮೇಲೆ, ಬೇರೆ ಕಾರಣಕ್ಕೆ ಸಂಚಾರಿ ಪೊಲೀಸರು ದಂಡ ವಿಧಿಸುವದಿಲ್ಲ. ಅವರದ್ದು ಏನಿದ್ದರು, ತಿಂಗಳಿಗೊಮ್ಮೆ ಅನ್ನೋದು ಸ್ಪಟಿಕದಷ್ಟೇ ಸತ್ಯ.
ಧಾರವಾಡದ ಸಂಚಾರಿ ಠಾಣೆ ಪೊಲೀಸರು ಮಾತ್ರ ಎಲ್ಲೆಲ್ಲಿ ದಂಡ ಹಾಕಬೇಕು, ಎಲ್ಲೆಲ್ಲಿ, ಯಾರಿಗೆಲ್ಲ ಹಾಕಬಾರದು ಎಂದು ನಿರ್ಧರಿಸಿದಂತಿದೆ.
