ಸುಸಂಸ್ಕೃತ ನಗರಿ ಧಾರವಾಡದಲ್ಲಿ ಕೆಲ, ಹೈಸ್ಕೂಲ್ ಹಾಗೂ ಕಾಲೇಜು ವಿಧ್ಯಾರ್ಥಿಗಳು ಹಾದಿ ತಪ್ಪುತ್ತಿದ್ದಾರೆ.
ಪಡ್ಡೆ ಹುಡುಗರ ಕೈಯಲ್ಲಿ ನಿತ್ಯವೂ ಸಿಗರೇಟ್ ಉರಿಯುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿದೆ. ಹತ್ತನೇ ತರಗತಿ ಓದುವ ಮಕ್ಕಳು ಸಿಗರೇಟ್ ಸೇದುತ್ತ ನಿಲ್ಲುತ್ತಾರೆ.
ಧಾರವಾಡದ ಜುಬಿಲಿ ಸರ್ಕಲ್, ಶ್ರೀನಗರ ಸರ್ಕಲ್, ಸೇರಿದಂತೆ ಹಲವು ಪ್ರದೇಶಗಳಲ್ಲಿ ಯುವಕರು ಸಾರ್ವಜನಿಕ ಸ್ಥಳದಲ್ಲಿಯೇ ಸಿಗರೇಟ್ ಸೇವನೆ ಮಾಡುತ್ತಿದ್ದಾರೆ.
ಧಾರವಾಡದ ಟೋಲ್ ನಾಕಾ ಅಕ್ಕಪಕ್ಕ ಮಧ್ಯರಾತ್ರಿವರೆಗೂ ಸಿಗರೇಟ್ ಮಾರಾಟ ಮಾಡಲಾಗುತ್ತಿದೆ. ಟೋಲ್ ನಾಕಾ ಬಳಿ ಸಿಗರೇಟ್ ಹೊಗೆ ಸಾಮಾನ್ಯವಾಗಿದೆ. ದಾರಿ ಹೋಕರು ಮೂಗು ಮುಚ್ಚಿಕೊಂಡೆ ಓಡಾಟ ನಡೆಸಬೇಕಾದ ಪರಿಸ್ಥಿತಿ ಟೋಲ್ ನಾಕಾ ಬಳಿ ಉಂಟಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆಗೆ ನಿಷೇಧ ಹೇರಿದರು ಸಹ, ಸಿಗರೇಟ್ ಸೇವನೆ ಸಾಮಾನ್ಯವಾಗಿದೆ.