ಚಾಲಕನ ನಿರ್ಲಕ್ಷದಿಂದಾಗಿ ಖಾಸಗಿ ಬಸ್ಸೋಂದು ಪಲ್ಟಿ ಹೊಡೆದ ಘಟನೆ ತುಮಕೂರಿನ ಶಿರಾ ಬಳಿ ನಡೆದಿದೆ.
ಬಳ್ಳಾರಿಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ಸಿನಲ್ಲಿ 45 ಜನ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ. 45 ಜನರ ಪೈಕಿ 30 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ಧಾಖಲು ಮಾಡಲಾಗಿದೆ.
ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಈ ಘಟನೆ ನಡೆದಿದ್ದರಿಂದ ತಾಸಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣ ಗಾಯಳುಗಳನ್ನು ಆಸ್ಪತ್ರೆಗೆ ರವಾನಿಸಿ, ತನಿಖೆ ನಡೆಸುತ್ತಿದ್ದಾರೆ